ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ, ಸುಮಾರು₹ 15 ಕೋಟಿ ವೆಚ್ಚದಲ್ಲಿ ತಯಾರಾದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಭಾರಿ ಯಶಸ್ಸು ಗಳಿಸಿದೆ.ಸಾಕಷ್ಟು ವಿವಾದಗಳ ಹೊರತಾಗಿಯೂ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಈಗಾಗಲೇ ₹ 200 ಕೋಟಿಗೂ ಅಧಿಕ ಗಳಿಕೆ ಕಂಡು ಮುನ್ನುಗ್ಗುತ್ತಿದೆ.

ಬಹುಭಾಷಾ ನಟಿ ತಾಪ್ಸಿ ಪನ್ನು, ಕಾಶ್ಮೀರ್ ಫೈಲ್ಸ್ ಸಿನಿಮಾದ ಗಳಿಕೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾದ ಯಶಸ್ಸಿಗೆ ಕಾರಣ ಏನೇ ಇರಬಹುದು ಅಥವಾ ಸಣ್ಣ ಬಜೆಟ್ನ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೇಗೆ ಅಚ್ಚರಿಯ ಗಳಿಕೆ ಕಂಡಿತು ಎಂಬುದು ಮುಖ್ಯವಲ್ಲ. ಆದರೆ, ಅಂತಿಮವಾಗಿ ಸಿನಿಮಾ ಎಷ್ಟು ಗಳಿಸಿದೆ ಎನ್ನುವುದನ್ನೇ ತಾವು ಪರಿಗಣಿಸುವುದಾಗಿ ಹೇಳಿದ್ದಾರೆ.

90ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಿಸಿದ ವಿಚಾರಗಳ ಮೇಲೆ ವಿವೇಕ್ ಅಗ್ನಿಹೋತ್ರಿ ಅವರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮತ್ತೆ ಕೆಲವರಿಂದ ಟೀಕೆಗಳೂ ಕೇಳಿಬಂದಿವೆ.

ಈ ಕುರಿತು ಮಾತನಾಡಿರುವ ತಾಪ್ಸಿ,ಕಾಶ್ಮೀರ್ ಫೈಲ್ಸ್ನಂತಹ ಸಣ್ಣ ಸಿನಿಮಾ ಇಷ್ಟು ದೊಡ್ಡ ಗಳಿಕೆ ಕಂಡಿದೆ ಎಂದರೆ, ನೀವು ಅದನ್ನು ಕೆಟ್ಟ ಸಿನಿಮಾ ಎನ್ನಲಾಗದು. ತಮ್ಮದೇ ಅಭಿಪ್ರಾಯಗಳನ್ನು ಹೇಳುವ ಹಕ್ಕು ಎಲ್ಲರಿಗೂ ಇದೆ. ಆದರೆ, ಅಂತಿಮವಾಗಿ ಸಿನಿಮಾದ ಗಳಿಕೆಯೇ ಎಲ್ಲವನ್ನೂ ಹೇಳುತ್ತದೆ ಎಂದಿದ್ದಾರೆ.

ಸಿನಿಮಾವು ಹಲವರಿಗೆ ಭಾವನಾತ್ಮಕವಾಗಿ ಹತ್ತಿರವಾಗುತ್ತದೆ ಎಂದಿರುವ ತಾಪ್ಸಿ, ಯಾವುದೇ ಸಿನಿಮಾವು ಶೇ 100 ರಷ್ಟು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳಲಾರದು ಎಂದೂ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ,ಅಗ್ನಿಹೋತ್ರಿ ಅವರ ಸಿನಿಮಾ ನಿರ್ಮಾಪಕರು ಭಯ ಪಡುವ ಅಗತ್ಯವಿಲ್ಲ ಎಂಬುದನ್ನು ಸಾರಿದೆ. ಒಂದು ಸಿನಿಮಾ ಚೆನ್ನಾಗಿದ್ದರೆ, ಜನರು ಖಂಡಿತಾ ನೋಡುತ್ತಾರೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.