ತಾವು ಮನೆಯಲ್ಲಿದ್ದಾಗ ಪಕ್ಕದ ಕಟ್ಟಡದಲ್ಲಿ ನಿಂತು ತಮ್ಮ ಫೋಟೊ ಕ್ಲಿಕ್ಕಿಸಿರುವ ಅಪರಿಚಿತರ ವಿರುದ್ಧ, ಅದನ್ನು ಪ್ರಕಟಿಸಿರುವ ಮಾಧ್ಯಮ ಸಂಸ್ಥೆಯ ಕುರಿತಾಗಿ ಬಾಲಿವುಡ್ ನಟಿ ಅಲಿಯಾ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಅಲಿಯಾ, ಇದು ಖಂಡಿತ ಅಸಹ್ಯದ ಕೆಲಸ. ಎಲ್ಲ ಮಿತಿಗಳು ದಾಟುವ ಕೆಲಸವಾಗಿದೆ. ಸಾಮಾನ್ಯ ಮಹಿಳೆ ಅಥವಾ ಸೆಲೆಬ್ರೆಟಿ ಎಂಬುದನ್ನು ಒಂದು ಕ್ಷಣ ಪಕ್ಕಕ್ಕಿಟ್ಟು ಮಹಿಳೆಯೊಬ್ಬಳು ಅವಳದ್ದೇ ಮನೆಯಲ್ಲಿ ಸುರಕ್ಷಿತ ಭಾವನೆಯಿಂದ ಇರಲು ಸಾಧ್ಯವಿಲ್ಲ ಎಂದರೆ ಏನರ್ಥ ಎಂದು ಯೋಚಿಸಿ. ನಾನು ನನ್ನ ಮನೆಯ ಒಳಗೆ ಕುಳಿತಿದ್ದೆ. ಯಾರೋ ನನ್ನನ್ನು ಗಮನಿಸುತ್ತಿದ್ದಾರೆ ಎನಿಸಿತು. ಹೊರಬಂದು ನೋಡಿದರೆ ಪಕ್ಕದ ಕಟ್ಟಡದಲ್ಲಿ ಇಬ್ಬರು ನನ್ನ ಕಡೆ ಕ್ಯಾಮೆರಾ ಆನ್ ಮಾಡಿ ನಿಂತಿದ್ದರು. ಇದು ಯಾವ ರೀತಿಯಲ್ಲಿ ಸರಿಯಾದ ಹೆಜ್ಜೆ? ಖಾಸಗಿ ತನಕ್ಕೆ ತಂದ ಧಕ್ಕೆಯಲ್ಲವೇ? ಎಂದಿದ್ದಾರೆ. ಜೊತೆಗೆ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ವಿಷಯ ತಲುಪಿಸುವ ಯತ್ನ ಮಾಡಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪಡೆದ ಅಲಿಯಾ ಭಟ್ ವಿರುದ್ಧ ನಿನ್ನೆ ತಾನೆ ಕಂಗನಾ ರನೌತ್ ಆರೋಪ ಮಾಡಿದ್ದರು. ತಮ್ಮ ಫೋನ್ ಅನ್ನು ಸೆಲೆಬ್ರೆಟಿ ದಂಪತಿ ಟ್ರೇಸ್ ಮಾಡುತ್ತಾರೆ ಎಂದು ಕಂಗನಾ ಬಹಳ ಸಮಯದಿಂದ ಆರೋಪ ಮಾಡಿಕೊಂಡು ಬರುತ್ತಲೇ ಇದ್ದಾರೆ. ಇದೀಗ ಅಲಿಯಾಗೂ ಅದೇ ರೀತಿ ಅನುಭವವಾಗಿದೆ.

ಅನುಷ್ಕಾ ಶರ್ಮಾ, ಕರಣ್ ಜೋಹರ್, ಜಾನ್ವಿ ಕಪೂರ್ ಕೂಡ ಅಲಿಯಾ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು ತಮಗೂ ಇದೇ ರೀತಿ ಅನುಭವವಾಗಿರುವುದನ್ನು ಹಂಚಿಕೊಂಡಿದ್ದಾರೆ.

ಅಲಿಯಾ ಭಟ್ ಖಾಸಗಿ ಕ್ಷಣದ ಈ ಚಿತ್ರವನ್ನು ಮಾಧ್ಯಮಸಂಸ್ಥೆಯೊಂದು ಪ್ರಕಟಿಸಿದೆ. ಅದರ ವಿರುದ್ಧ ಅಲಿಯಾ ಆಕ್ರೋಶ ಹೊರಹಾಕಿದ್ದಾರೆ. ಇದು ಸರಿಯಾದ ಮಾರ್ಗವಲ್ಲ. ತಮಗೂ ಖಾಸಗಿ ಜೀವನ ಇರುತ್ತದೆ. ತಮ್ಮ ಒಪ್ಪಿಗೆ ಇಲ್ಲದೆ ಈ ರೀತಿ ಚಿತ್ರಗಳನ್ನು ಪ್ರಕಟಿಸುವುದು ಸರಿಯಲ್ಲ ಎಂಬುದಾಗಿ ಅಲಿಯಾ ಕಿಡಿಕಾರಿದ್ದಾರೆ.

ವಿರಾಟ್ ಕೊಹ್ಲಿ ರೂಂನ ಖಾಸಗಿ ವಿಡಿಯೊ ಕೂಡ ಇದೇ ರೀತಿಯಾಗಿ ಹರಿದಾಡಿತ್ತು. ಅನುಷ್ಕಾ ಶರ್ಮಾ ಪ್ರಶ್ನೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.