ಸಿನಿಮಾದ ಟೈಟಲ್ ಲಾಂಚ್, ಟೀಸರ್, ಟ್ರೇಲರ್ ಇವುಗಳನ್ನು ಬಿಡುಗಡೆ ಮಾಡಿ ಜನರ ಗಮನಸೆಳೆಯುವುದನ್ನು ಕೇಳಿದ್ದೇವೆ. ಈ ‘ಬ್ರಹ್ಮಚಾರಿ’ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾನೆ. ಸಿನಿಮಾ ಟೀಸರ್ ಬಿಡುವುದರ ಬದಲಾಗಿ ಟೀಸರ್ಗೇ ಟೀಸರ್ ಬಿಡುಗಡೆ ಮಾಡುತ್ತಿದ್ದಾನೆ.

ಇದ್ಯಾವ ಹೊಸ ನಮೂನೆ? ಹೌದು. ಹೊಸ ಟ್ರೆಂಡ್ ಶುರುಮಾಡಬೇಕು ಎಂಬುದೇ ಈ ಪ್ರಯತ್ನದ ಉದ್ದೇಶ.

ಚಂದ್ರಮೋಹನ್ ನಿರ್ದೇಶನದ ‘ಬ್ರಹ್ಮಚಾರಿ’ ಸಿನಿಮಾದಲ್ಲಿ ನೀನಾಸಂ ಸತೀಶ್ ನಾಯಕನಾಗಿ ನಟಿಸುತ್ತಿರುವುದು ಗೊತ್ತಿರುವ ವಿಷಯವೇ. ಈ ಚಿತ್ರದ ನಾಯಕಿ ಅದಿತಿ ಪ್ರಭುದೇವ. ಇತ್ತೀಚೆಗಷ್ಟೇ ಚಿತ್ರತಂಡ ಫಸ್ಟ್ಲುಕ್ ಬಿಡುಗಡೆಮಾಡಿತ್ತು. ಅದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಒಳ್ಳೆಯ ಪ್ರಶಂಸನೆಯೂ ವ್ಯಕ್ತವಾಗಿತ್ತು.

ಇದೇ ತಿಂಗಳು 20ಕ್ಕೆ ‘ಬ್ರಹ್ಮಚಾರಿ’ ನಾಯಕ ಸತೀಶ್ ಜನ್ಮದಿನ. ಅಂದೇ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಂಡ ಯೋಜಿಸಿದೆ. ಟೀಸರ್ ಬಿಡುಗಡೆ ಮಾಡುವುದು ಸಾಮಾನ್ಯ ಸಂಗತಿ. ಆದರೆ ಈ ಟೀಸರ್ಗೆ ಪೂರ್ವಭಾವಿಯಾಗಿ ಇನ್ನೊಂದು ಟೀಸರ್ ಅನನ್ನು ಜೂ. 10ರಂದು ಬಿಡುಗಡೆ ಮಾಡುತ್ತಿರುವುದು ವಿಶೇಷ.

‘ಸಿನಿಮಾದ ಮುಖ್ಯ ಟೀಸರ್ ನನ್ನ ಬರ್ತ್ಡೇ ದಿನ ಅಂದರೆ ಜೂ. 20ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಆ ಟೀಸರ್ಗೆ ಜೂನ್ 10ರಂದು ಮತ್ತೊಂದು ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಹೀಗೆ ಟೀಸರ್ಗೇ ಟೀಸರ್ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು. ಇದೊಂದು ವಿಶಿಷ್ಟ ಪ್ರಯತ್ನ’ ಎನ್ನುತ್ತಾರೆ ಸತೀಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.