2021ನೇ ವರ್ಷವು ಕೆಲವರಿಗೆ ಖುಷಿ ಗಳಿಗೆಗಳನ್ನು ನೀಡಿದರೆ, ಇನ್ನು ಕೆಲವರಿಗೆಆಘಾತಗಳನ್ನು ತಂದಿತು. ಇದು ಕೇವಲ ಸಾಮಾನ್ಯರಿಗೆ ಮಾತ್ರವಲ್ಲದೇಹೈ-ಪ್ರೊಫೈಲ್ ಸೆಲೆಬ್ರಿಟಿ ಜೋಡಿಗಳಿಗೂ ಅನ್ವಯಿಸುತ್ತದೆ. 2021ರಲ್ಲಿ ಹಲವು ಸೆಲೆಬ್ರಿಟಿ ಜೋಡಿಗಳು ದೂರವಾದರು. ಅಂತಹ ಜೋಡಿಯ ಫೋಟೊಗಳನ್ನು ಇಲ್ಲಿ ನೋಡಬಹುದು.
ಬಾಲಿವುಡ್ ನಟ ಆಮಿರ್ ಖಾನ್ ಮತ್ತು ನಿರ್ಮಾಪಕಿ ಕಿರಣ್ ರಾವ್ (ಜು.3) ತಮ್ಮ 15 ವರ್ಷಗಳ ದಾಂಪತ್ಯ ಜೀವನವನ್ನು ವಿಚ್ಛೇದನದ ಮೂಲಕ ಅಂತ್ಯಗೊಳಿಸಲು ನಿರ್ಧರಿಸಿರುವುದಾಗಿ ಘೋಷಿಸಿದರು.
ADVERTISEMENT
ತೆಲುಗು ಸಿನಿಮಾ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ನಡುವಿನ ದಾಂಪತ್ಯ ಅ.2ರಂದು ಮುರಿದು ಬಿದ್ದಿತು.
ಬಾಲಿವುಡ್ ನಟಿ ಸುಷ್ಮಿತಾ ಸೇನ್ ಅವರು ಪ್ರಿಯಕರ ರೋಹಮನ್ ಶಾಲ್ ಅವರೊಂದಿಗಿನ ಸಂಬಂಧವನ್ನು ಡಿ.23ರಂದು ಕಡಿದುಕೊಂಡರು.
ಖ್ಯಾತ ನಟಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಅವರು ಉದ್ಯಮಿ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಜೂನ್ನಲ್ಲಿ ಅಂತ್ಯ ಹೇಳಿದರು.