ಕನ್ನಡದ ನಟಿ ನಿಕ್ಕಿ ಗರ್ಲಾನಿ ತಮಿಳಿನಕಾಮಿಡಿ ಚಿತ್ರ ‘ಚಾರ್ಲಿ ಚಾಪ್ಲಿನ್ 2’ ಚಿತ್ರೀಕರಣವನ್ನು ಈಗಷ್ಟೇ ಮುಗಿಸಿದ್ದಾರೆ. ಈ ಚಿತ್ರದುದ್ದಕ್ಕೂ ಅವರಿಗೆ ‘ಡಾನ್ಸಿಂಗ್ ಸ್ಟಾರ್ಪ್ರಭುದೇವ ಅವರ ಮನೆಯಲ್ಲಿ ಆತಿಥ್ಯ ನೀಡಲಾಗಿತ್ತಂತೆ. ಈ ವಿಷಯವನ್ನು ಖುದ್ದು ನಿಕ್ಕಿ ಹೇಳಿಕೊಂಡಿದ್ದಾರೆ.

‘ಈ ಚಿತ್ರ ತಂಡದೊಂದಿಗೆ ಕಳೆದ ಸಮಯ ಅಮೂಲ್ಯವಾದುದು. ಒಂದು ಕುಟುಂಬದಂತೆ ಎಲ್ಲರೂ ಒಟ್ಟಾಗಿ ಇದ್ದೆವು. ಪ್ರಭು ಅಂಕಲ್ (ಪ್ರಭುದೇವ) ಈ ಚಿತ್ರದಲ್ಲಿ ನನ್ನ ತಂದೆಯ ಪಾತ್ರ ಮಾಡಿದ್ದಾರೆ. ಅವರ ಬಗ್ಗೆ ಯೋಚನೆ ಮಾಡಿದಾಗಲೆಲ್ಲ ಈ ಚಿತ್ರದ ಚಿತ್ರೀಕರಣದುದ್ದಕ್ಕೂ ಅವರು ತೋರಿದ ಪ್ರೀತಿಯೇ ನೆನಪಾಗುತ್ತದೆ. ಅವರ ಮನೆಯಿಂದ ಊಟ ಒದಗಿಸಿದ್ದನ್ನು ಮರೆಯಲಾಗದು’ ಎಂದು ನಿಕ್ಕಿ ಮನತುಂಬಿ ಹೇಳಿದರು.

ಚಿತ್ರದ ಕುರಿತು ಮಾಹಿತಿ ನೀಡಲು ನಿರ್ದೇಶಕರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾತನಾಡಿದ್ದಕ್ಕಿಂತ ಹೆಚ್ಚು ಪ್ರಭುದೇವ್ ಹೊಗಳಿಕೆಗೇ ನಿಕ್ಕಿ ಸಮಯ ತೆಗೆದುಕೊಂಡರು.

‘ಪ್ರಭುದೇವ ಸರ್ ಪ್ರತಿಭೆಯ ಪವರ್ಹೌಸ್. ಈ ಚಿತ್ರಕ್ಕೆ ಹಾಡುಗಳನ್ನು ಬರೆಯುವ ಮೂಲಕ ಅವರು ಗೀತರಚನೆಕಾರರೂ ಆಗಿದ್ದಾರೆ. ಅವರಿಂದ ಕಲಿತ ಸಂಗತಿ ಎಷ್ಟೋ ಇವೆ. ಅವರೊಂದಿಗೆ ನೃತ್ಯ ಮಾಡಿದ ಅನುಭವವಂತೂ ಅಸಾಧಾರಣವಾಗಿತ್ತು’ ಎಂದು ನಿಕ್ಕಿ ಗರ್ಲಾನಿ ಹೇಳಿದರು.

2002ರಲ್ಲಿ ಚಾರ್ಲಿ ಚಾಪ್ಲಿನ್ ಚಿತ್ರದ ಮೂಲಕ ಪ್ರಭುದೇವ ಅವರೊಂದಿಗೆ ಬೆಳೆದ ನಂಟು ಈ ಸೀಕ್ವೆಲ್ನಲ್ಲಿಯೂ ಮುಂದುವರಿದಿದೆ. ಅವರೊಂದಿಗಿನ ಒಂದು ಸಾಮಾನ್ಯ ಚರ್ಚೆಯೇ ಚಿತ್ರದ ಎರಡನೇ ಭಾಗವನ್ನು ಕೈಗೆತ್ತಿಕೊಳ್ಳಲು ನಾಂದಿಯಾಯಿತು ಎಂದು ಸಾಕ್ಷಿ ಚಿದಂಬರಂ ಹೇಳಿದರು.

‘ಚಾರ್ಲಿ ಚಾಪ್ಲಿನ್ 2’, 2002ರಲ್ಲಿ ತೆರೆಕಂಡಿದ್ದ ‘ಚಾರ್ಲಿ ಚಾಪ್ಲಿನ್’ ಚಿತ್ರದ ಮುಂದುವರಿದ ಭಾಗ. ಶಕ್ತಿ ಚಿದಂಬರಂ ನಿರ್ದೇಶನದ ಈ ಚಿತ್ರಕ್ಕೆ ಅಮ್ಮ ಕ್ರಿಯೇಷನ್ಸ್ನ ಟಿ.ಶಿವ ಬಂಡವಾಳ ಹೂಡಿದ್ದಾರೆ. ‘ಮೊಟ್ಟ ಶಿವ ಕೆಟ್ಟ’ ಚಿತ್ರ ಖ್ಯಾತಿಯ ಅಮರೇಶ್ ಸಂಗೀತ ನೀಡಿದ್ದಾರೆ.

ಆದಾ ಶರ್ಮ ಮತ್ತು ಅರವಿಂದ ಆಕಾಶ್ ಈ ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.