ರಾಕೇಶ್ ಬಿರಾದಾರ್, ಅದ್ವಿತಿ ಶೆಟ್ಟಿ ಅಭಿನಯದ ‘ಧೀರಸಾಮ್ರಾಟ್’ ಚಿತ್ರದ ‘ಏನ್ ಚಂದ ಕಾಣಿಸ್ತಾವಳೆ’ ಹಾಡನ್ನು ನಟ ಧ್ರುವಸರ್ಜಾ ಇತ್ತೀಚೆಗೆ ಬಿಡುಗಡೆ ಮಾಡಿದರು.

ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಪವನ್ಕುಮಾರ್(ಪಚ್ಚಿ) ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

‘ಸಿನಿಮಾವು ಅಣ್ಣ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಸೆಟ್ಟೇರಬೇಕಾಗಿತ್ತು, ಕಾರಣಾಂತರದಿಂದ ಮುಂದಕ್ಕೆ ಹೋಯಿತು. ನಾನು ’ಅದ್ದೂರಿ’ ಮಾಡಿದಾಗ ಹೊಸಬನಾಗಿದ್ದೆ. ಅಂದಿನಿಂದ ನಿರ್ದೇಶಕ ಪವನ್ ಪರಿಚಯ. ನಮ್ಮದು ಹೋಗೋ ಬಾರೋ ಗೆಳೆತನ. ಈಗ ಅವರ ನಿರ್ದೇಶನದ ಮೊದಲ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಹೊಸಬರಿಗೆ ಉತ್ತೇಜನ ನೀಡಿ. ಅವರಲ್ಲೂ ಪ್ರತಿಭೆ ಎನ್ನುವುದು ಇರುತ್ತದೆ. ಇಂತಹವರನ್ನು ಬೆಳೆಸಿದರೆ ಇವರ ಕಲೆಗೆ ಬೆಲೆ ಕೊಟ್ಟಂತೆ ಆಗುತ್ತದೆ’ ಎಂದು ಧ್ರುವ ಸರ್ಜಾ ಗೆಳೆಯನ ಪ್ರಯತ್ನಕ್ಕೆ ಶುಭ ಕೋರಿದರು.

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ ತೆರೆಗೆ ಬರುವ ಹಂತ ತಲುಪಿದೆ. ‘ಕುಟುಂಬ ಸಮೇತ ನೋಡಬಹುದಾದ ಸೆಸ್ಪನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಐದು ಧೀರ ಹುಡುಗರ ಗೆಳೆತನ ಹೇಗಿರುತ್ತೆ ಎಂಬುದನ್ನು ಹೇಳಲಾಗಿದೆ. ಕೊನೆತನಕ ಕುತೂಹಲ ಉಳಿಸಿಕೊಳ್ಳಲಿದ್ದು, ಕ್ಲೈಮಾಕ್ಸ್ನಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಬರುವಂತೆ ಮಾಡುತ್ತದೆ’ ಎಂದು ನಿರ್ದೇಶಕ ಪವನ್ ಚಿತ್ರದ ಕುರಿತು ವಿವರಿಸಿದರು.

ತನ್ವಿ ಪ್ರೊಡಕ್ಷನ್ ಹೌಸ್ ಚಿತ್ರವನ್ನು ನಿರ್ಮಿಸುತ್ತಿದೆ. ಶೋಭರಾಜ್, ನಾಗೇಂದ್ರಅರಸು, ಬಲರಾಜವಾಡಿ, ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ. ರಾಘವ್ ಸುಭಾಷ್ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ಕನಕಪುರ, ನೆಲಮಂಗಲ ಮೊದಲಾದೆಡೆ ಚಿತ್ರೀಕರಣ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.