ಬೆಂಗಳೂರು: ಆರ್ಆರ್ಆರ್ ಚಿತ್ರದ ‘ಜನನಿ’ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ, ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇಷ್ಟು ದಿನ ಕಳೆದರೂ ಎಲ್ಲರೂ ಇನ್ನೂ ಆಘಾತದಲ್ಲಿದ್ದೇವೆ. ಒಂದೆರಡು ಬಾರಿಯಷ್ಟೇ ನಾನು ಪುನೀತ್ ಅವರನ್ನು ಭೇಟಿಯಾಗಿದ್ದೆ. ನಾಲ್ಕು ವರ್ಷದ ಹಿಂದೆ ಇದೇ ಮನೆಯಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆ. ಆ ಸಂದರ್ಭದಲ್ಲಿ ಒಬ್ಬ ಸ್ಟಾರ್ ನಟನೊಂದಿಗೆ ಮಾತನಾಡುತ್ತಿದ್ದೇನೆ ಎಂದು ನನಗೆ ಅನಿಸಲೇ ಇಲ್ಲ. ಪಕ್ಕದ ಮನೆಯವರ ಜೊತೆ ಮಾತನಾಡಿದಂತೆ ಇತ್ತು. ಹೀಗಾಗಿದೆ ಎಂದು ಯೋಚಿಸಿದಾಗಲೇ ಹೃದಯ ಭಾರವಾಗುತ್ತದೆ. ಈ ನೋವನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ. ಪ್ರಸಕ್ತ ಸಮಾಜದಲ್ಲಿ ಒಬ್ಬರಿಗೆ ಸಹಾಯ ಮಾಡಿದರೆ ಇಡೀ ಜಗತ್ತಿಗೆ ತಿಳಿಯಬೇಕು ಎಂದು ನಾವು ಆಶಿಸುತ್ತೇವೆ. ಆದರೆ ಪುನೀತ್ ಅವರು ಈ ಬಗ್ಗೆ ಮೌನವಾಗಿದ್ದರು. ಅವರ ನಿಧನದ ಬಳಿಕವಷ್ಟೇ ಅವರ ಕೆಲಸ ಕಾರ್ಯಗಳು ಬೆಳಕಿಗೆ ಬಂದವು’ ಎಂದು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.