‘ಕಾಫಿರ್’ ವೆಬ್ ಸರಣಿಯ ಮನೋಜ್ಞ ಅಭಿನಯಕ್ಕಾಗಿ ಅಭಿಮಾನಿಗಳಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿರುವ ದಿಯಾ ಮಿರ್ಜಾ, ವೆಬ್ ವೇದಿಕೆಗಳು ಸಂಪಾದಿಸಿರುವ ಶಕ್ತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಮಾತುಗಳಲ್ಲಿ ನಟಿಯರಿಗೆ ಒಂದು ಸಂದೇಶ ಕೂಡ ಇದೆ. ‘ಆ ನಟಿಗೆ ವಯಸ್ಸಾಯಿತು’ ಎಂದು ಮಹಿಳೆಯರನ್ನು ಪಕ್ಕಕ್ಕೆ ಸರಿಸುವ ಪರಿಪಾಠಕ್ಕೆ ವೆಬ್ ಮಾಧ್ಯಮ ಕೊನೆ ಹಾಡಬಲ್ಲದು ಎಂದು ದಿಯಾ ನಂಬಿದ್ದಾರೆ.

‘ಇಂಡಿಯಾ ವೆಬ್ ಫೆಸ್ಟ್’ಗೆ ಬಂದಿದ್ದ ಅವರು ವೆಬ್ ಕುರಿತ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ‘ವೆಬ್ ಸರಣಿ ಅಥವಾ ವೆಬ್ ಮೂಲಕ ಪ್ರಸಾರ ಆಗುವ ಮನರಂಜನಾ ಕಾರ್ಯಕ್ರಮಗಳ ನಿರ್ಮಾಪಕರು, ನಿರ್ದೇಶಕರು ಯಾವ ಪಾತ್ರಕ್ಕೆ ಯಾರು ಸೂಕ್ತ ಎಂಬುದನ್ನು ತೀರ್ಮಾನಿಸುವ ಸಂದರ್ಭದಲ್ಲಿ ಕಲಾವಿದರ ವಯಸ್ಸನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆ’ ಎಂದು ದಿಯಾ ಹೇಳಿದ್ದಾರೆ.

‘ಆ ನಟಿಗೆ ವಯಸ್ಸಾಯಿತು ಎಂದು, ಅವರನ್ನು ಪೂರ್ವಗ್ರಹಪೀಡಿತವಾಗಿ ನೋಡುವ ಧೋರಣೆ ಹಿಂದಿನಿಂದಲೂ ಇದೆ. ನಾವು ಕೂಡ ಇದನ್ನು ಕಳೆದ 15–20 ವರ್ಷಗಳಲ್ಲಿ ಅನುಭವಿಸಿದ್ದೇವೆ. ಆದರೆ ಈಗ, ವೆಬ್ ಸರಣಿಗಳಲ್ಲಿ ಮಹಿಳೆಯರಿಗೆ ಒಳ್ಳೊಳ್ಳೆಯ ಪಾತ್ರಗಳನ್ನು ನಿಭಾಯಿಸುವ ಅವಕಾಶಗಳು ಲಭ್ಯವಾಗುತ್ತಿವೆ. ತಾವು ಬಯಸಿದ ಪಾತ್ರಗಳು ತಮ್ಮ ವಯಸ್ಸಿನ ಕಾರಣಕ್ಕೆ ಸಿಗುತ್ತಿಲ್ಲ ಎಂಬ ಪರಿಸ್ಥಿತಿ ಎದುರಿಸುತ್ತಿದ್ದ ನಟಿಯರಿಗೆ ವೆಬ್ ಮಾಧ್ಯಮದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿವೆ’ ಎಂದು ದಿಯಾ ಹೇಳಿದರು.

‘ವಹೀದಾ ರೆಹ್ಮಾನ್, ಸ್ಮಿತಾ ಪಾಟೀಲ್, ಶಬಾನಾ ಆಜ್ಮಿ, ಮಾಧುರಿ ದೀಕ್ಷಿತ್, ಶ್ರೀದೇವಿ ಅವರಂತಹ ನಟಿಯರು ಗಟ್ಟಿಯಾದ ಪಾತ್ರಗಳನ್ನು ನಿಭಾಯಿಸಿದ ಸಿನಿಮಾ ನೋಡಿಕೊಂಡು ಬೆಳೆದೆ ನಾನು. ಆದರೆ, ಸಿನಿಮಾ ಉದ್ಯಮವು ಪುರುಷ ಪ್ರಧಾನ ಸಿನಿಮಾಗಳನ್ನು ಮಾಡಲು ಶುರುಮಾಡಿದ ನಂತರ ಮಹಿಳೆಯರ ಪಾತ್ರ ಸೀಮಿತವಾಗತೊಡಗಿತು. ಅಂತಹ ಹಲವು ಕಥೆಗಳ ಭಾಗ ನಾನು’ ಎಂದು ದಿಯಾ ತಿಳಿಸಿದ್ದಾರೆ.

‘ಕಾಫಿರ್’ ವೆಬ್ ಸರಣಿಯು ದಿಯಾ ಅವರು ನಟಿಸಿದ ಮೊದಲ ವೆಬ್ ಆಧಾರಿತ ಕಾರ್ಯಕ್ರಮ. ಈಗ ಅವರು ನಿಖಿಲ್ ಅಡ್ವಾಣಿ ಅವರ ‘ಮೊಘಲ್ಸ್’ ವೆಬ್ ಸರಣಿಯಲ್ಲಿ ಕೂಡ ಅಭಿನಯಿಸಲಿದ್ದಾರೆ. ‘ಕಾಫಿರ್’ ವೆಬ್ ಸರಣಿಯು ಈಗ ಕನ್ನಡಕ್ಕೆ ಕೂಡ ಡಬ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.