ಹೊಸಪೇಟೆ (ವಿಜಯನಗರ): ಹೊಸಪೇಟೆಯ ಯುವ ಉದ್ಯಮಿಗಳಾದ ಮನೀಶ್ ಮೆಹ್ತಾ ಅವರು ನಿರ್ಮಾಪಕ, ನಟ ಮಿತ್ರಾ, ರೋಹಿತ್, ತನ್ವೀರ್, ಸಂಕೇತ್ ಜತಗೆ ನಿರ್ಮಿಸಿರುವ, ಸೈಬರ್ ಅಪರಾಧ ಕಥೆ ಒಳಗೊಂಡ ಥ್ರಿಲ್ಲರ್ ಸಿನಿಮಾ ‘ಡೈಮಂಡ್ ಕ್ರಾಸ್’ ಜುಲೈ 28ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.

‘ರಾಮ್‌ದೀಪ್ ಚಿತ್ರದ ನಿರ್ದೇಶಕರು. ಸ್ವತಃ ಕರಾಟೆಪಟು ಹಾಗೂ ರಂಗಭೂಮಿ ಕಲಾವಿದರಾಗಿರುವ ರಜತ್ ಅಣ್ಣಪ್ಪ ಡ್ಯೂಪ್ ಇಲ್ಲದೆ ನಟಿಸಿರುವ, ಅದ್ಭುತ ಫೈಟಿಂಗ್ ದೃಶ್ಯಗಳಿರುವ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ರೂಪಿಕಾ ಸಿನಿಮಾದ ನಾಯಕಿಯಾಗಿದ್ದಾರೆ’ ಎಂದು ನಿರ್ಮಾಪಕರಲ್ಲಿ ಒಬ್ಬರಾದ ನಟ ಮಿತ್ರಾ ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸುಮಾರು ₹3 ಕೋಟಿ ಬಜೆಟ್‌ನ ಈ ಸಿನಿಮಾವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾರ್ಗದರ್ಶನ ಚಿತ್ರಕ್ಕಿದೆ. ರೋಜರ್ ನಾರಾಯಣ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಸಂತೋಷ್ ರಾಧಾಕೃಷ್ಣನ್ ಅವರ ಛಾಯಾಗ್ರಹಣ, ಅನೀಶ್ ಚೆರಿಯನ್ ಅವರ ಸಂಗೀತವಿದೆ’ ಎಂದರು.

ನಟಿ ರೂಪಿಕಾ ಮಾತನಾಡಿ, ‘ಸಂಭಾಷಣೆ ಕಡಿಮೆ ಇದ್ದರೂ ಅಭಿನಯವೇ ಇಲ್ಲಿ ಪ್ರಧಾನವಾಗಿದೆ. ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ ಖುಷಿ ಇದೆ’ ಎಂದರು.

ನಟ ರಜತ್ ಅಣ್ಣಪ್ಪ ಮಾತನಾಡಿ, ‘ಯುವಜನತೆಗೆ ಖಂಡಿತ ಖುಷಿ ಕೊಡುವ ಹಾಗೂ ಸೈಬರ್ ಅಪರಾಧ ಕುರಿತಂತೆ ಜಾಗೃತಿ ಮೂಡಿಸುವ ಸಿನಿಮಾ ಇದಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.