ಮಂಗಳೂರು: 'ಘಟಶ್ರಾದ್ಧ'ದಂತಹ ಸಿನಿಮಾ ನಿರ್ಮಿಸಿದ್ದ ಕನ್ನಡದ ಹೆಸರಾಂತ ನಿರ್ಮಾಪಕರಾದ ಸದಾನಂದ ಸುವರ್ಣ (93) ಅವರು ಮಂಗಳೂರಿನಲ್ಲಿ ಮಂಗಳವಾರ ನಿಧನರಾದರು.

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯವರಾದ ಅವರು 1931, ಡಿಸೆಂಬರ್ 24 ರಂದು ಜನಿಸಿದ್ದರು.

ಅವರು ನಿರ್ಮಿಸಿದ ಮೊದಲ ಸಿನಿಮಾ ಘಟಶ್ರಾದ್ಧ. ಗಿರೀಶ್ ಕಾಸರವಳ್ಳಿ ನಿರ್ದೇಶನದ ಮೊದಲ ಸಿನಿಮಾವಿದು.

ಬಳಿಕ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಮನೆ, ಕುಬಿ ಮತ್ತು ಇಯಾಲ, ತಬರನ ಕಥೆ ಸಿನಿಮಾಗಳ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರು.

ದೂರದರ್ಶನಕ್ಕೆ ಗುಡ್ಡದ ಭೂತ ಧಾರಾವಾಹಿ ನಿರ್ಮಿಸಿ, ನಿರ್ದೇಶಿಸಿದ್ದರು. ಇದು ಪ್ರಕಾಶ್ ರೈ ಅವರಿಗೆ ಜನಪ್ರಿಯತೆ ತಂದು ಕೊಟ್ಟಿತು. ದೂರದರ್ಶನಕ್ಕೆ ಅವರ ನಿರ್ದೇಶನದ, ಶಿವರಾಮ ಕಾರಂತ ಅವರ ಸಂದರ್ಶನದ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಹತ್ತು ಕಂತುಗಳಲ್ಲಿ ಪ್ರಸಾರವಾಗಿತ್ತು.

ಅವರ ನಿರ್ದೇಶನದ 'ಕೋರ್ಟ್ ಮಾರ್ಷಲ್' ನಾಟಕವೂ ರಂಗಾಸಕ್ತರ ಮೆಚ್ಚುಗೆಗೆ ಪಾತ್ರವಾಗಿತ್ತು. ಮುಂಬೈನಲ್ಲಿ ರಾತ್ರಿ ಶಾಲೆಯಲ್ಲಿ ಕಲಿತು, ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಸುವರ್ಣ ಕೆಲ ವರ್ಷಗಳ ಹಿಂದೆ ಮಂಗಳೂರಿಗೆ ಮರಳಿ ಕೊಟ್ಟಾರ ಚೌಕಿ ಬಳಿ ನೆಲೆಸಿದ್ದರು. ನಂತರ ಕೊನೆಗಾಲದಲ್ಲಿ ಆಶ್ರಮವೊಂದರಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.