ಗಡಿನಾಡಿನಲ್ಲಿ ನೆಲ– ಜಲ– ಭಾಷೆಯ ಸಂಘರ್ಷ ಇಂದು ನಿನ್ನೆಯದಲ್ಲ. ಇಂತಹದೊಂದು ದೀರ್ಘಕಾಲದ ಸಮಸ್ಯೆಯ ಎಳೆಯನ್ನು ಮುಖ್ಯವಾಗಿಟ್ಟುಕೊಂಡು, ಅದಕ್ಕೊಂದು ಪ್ರೇಮಕಥೆಯನ್ನು ಬೆಸೆದ ‘ಗಡಿನಾಡು’ ಚಿತ್ರವನ್ನುನಾಗ್ ಹುಣಸೋದ್ನಿರ್ದೇಶಿಸಿದ್ದಾರೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದ್ದು, ಸದ್ಯ ಚಿತ್ರಡಿಟಿಎಸ್ ಹಂತದಲ್ಲಿದೆ.

ಚಿತ್ರತಂಡದೊಂದಿಗೆ ನಿರ್ದೇಶಕ ನಾಗ್ ಈ ವಿಷಯ ಹಂಚಿಕೊಳ್ಳಲು ಸುದ್ದಿಗೋಷ್ಠಿಗೆ ಹಾಜರಾಗಿದ್ದರು.ವಿದ್ಯಾಭ್ಯಾಸ ಮುಗಿಸಿ ಕುಂದಾನಗರಿಗೆ ಹೋಗುವ ಕಥಾನಾಯಕ ಅಲ್ಲಿನ ಗಡಿ ಸಮಸ್ಯೆಗಳನ್ನು ಕಂಡು, ಪರಿಹರಿಸಲುಗಡಿನಾಡ ಸೇನೆ ಕಟ್ಟುತ್ತಾನೆ. ಇದರ ಮಧ್ಯೆ ಮರಾಠಿ ಚೆಲುವೆಯೊಂದಿಗೆ ಪ್ರೇಮಾಂಕುರವಾಗುತ್ತದೆ. ಇದನ್ನು ಸಹಿಸದವರು ಕಷ್ಟಕೋಟಲೆ ಹುಟ್ಟುಹಾಕುತ್ತಾರೆ. ಚಿತ್ರದಲ್ಲಿ ನಾಲ್ವರು ಖಳನಾಯಕರು ಇರುವುದು ಮತ್ತೊಂದು ವಿಶೇಷ.ಕನ್ನಡದ ನಾಯಕ– ಮರಾಠಿ ನಾಯಕಿ ಕಷ್ಟಕೋಟಲೆಗಳನ್ನು ಮೆಟ್ಟಿ ನಿಂತು ಬದುಕಿನಲ್ಲಿ ಒಂದುಗೂಡುತ್ತಾರಾ? ಎನ್ನುವುದನ್ನು ಈ ಚಿತ್ರದ ಕುತೂಹಲ.

ಮಹಾಜನ್ ವರದಿಯಲ್ಲಿನ ಅಂಶಗಳ ಸಾರವನ್ನೂಚಿತ್ರಕಥೆಯಲ್ಲಿ ಹೇಳಲಾಗಿದೆ. ನೆಲ, ಜಲ, ಭಾಷೆಯ ಸಂಘರ್ಷಗಳಿಗೂ ಈ ಪ್ರೇಮಕಥೆಯಲ್ಲಿ ಮದ್ದು ಇದೆ. ಚಿತ್ರಕ್ಕೆ ಯಾವುದೇ ತಂಟೆ ತಕರಾರು ಎದುರಾಗಬಾರದೆಂದು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿಕೊಂಡೇ ಚಿತ್ರ ಮಾಡಲಾಗಿದೆ’ ಎನ್ನುವ ಮಾತು ಸೇರಿಸಿದರು ನಿರ್ದೇಶಕರು.

ಮರಾಠಿ ಹುಡುಗಿಯಾಗಿ ಬಣ್ಣ ಹಚ್ಚಿರುವ ಸಂಚಿತಾಪಡುಕೋಣೆಗೆ ಇದುನಾಯಕಿಯಾಗಿ ನಾಲ್ಕನೇ ಚಿತ್ರ.‘ಗಡಿ ಪ್ರದೇಶದಲ್ಲಿ ನಡೆಯುವ ಪ್ರೇಮ ಕಥೆ ಇದು. ನಾಯಕ ಬೆಳಗಾವಿಯವನು. ನಾನು ಮಹಾರಾಷ್ಟ್ರದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಕರ್ನಾಟಕದ ಗಡಿ ಪ್ರದೇಶದಲ್ಲಿ ನನ್ನ ಊರು. ನಮ್ಮಿಬ್ಬರ ನಡುವೆ ಪ್ರೀತಿ ಬೆಳೆಯುತ್ತದೆ. ಇದರಿಂದ ಮುಂದೆ ಏನೆಲ್ಲ ಸಮಸ್ಯೆಗಳಾಗುತ್ತವೆ. ಅದನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದು ಚಿತ್ರದ ಹೂರಣ. ಈ ಸಿನಿಮಾ ಗಡಿ ಪ್ರದೇಶದಲ್ಲಿರುವ ಸಮಸ್ಯೆಗಳ ಬಗೆಗೂ ಬೆಳಕು ಚೆಲ್ಲಲಿದೆ’ ಎನ್ನುವ ಮಾತು ಸೇರಿಸಿದರು ಸಂಚಿತಾ.

ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚಿರುವ ನಟ ಪ್ರಭುಸೂರ್ಯ ಅವರಿಗೆ ಇದು ಎರಡನೇಚಿತ್ರ. ಚರಣ್ರಾಜ್, ಶೋಭರಾಜ್, ದೀಪಕ್ ಶೆಟ್ಟಿ, ರಘುರಾಜು ಖಳನಾಯಕರಾಗಿನಟಿಸಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಘು ಸೀರುಂಡೆ, ಮಮತಾ, ಪುಷ್ಪಾ ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ:‘ಮುತ್ತುಕುಮಾರ’ನ ಸಾವಯವ ಪ್ರೀತಿ!

ನಾಗ್ ಹುಣಸೋಡು ನಿರ್ದೇಶನದ ಜತೆಗೆರಚನೆ, ಚಿತ್ರಕಥೆ, ಸಂಭಾಷಣೆಯ ನೊಗವನ್ನು ಹೊತ್ತಿದ್ದಾರೆ. ಛಾಯಾಗ್ರಹಣ ಗೌರಿವೆಂಕಟೇಶ್-ರವಿಸುವರ್ಣ ಅವರದ್ದು.ನಾಲ್ಕು ಹಾಡುಗಳಿಗೆ ಎಲ್ವಿನ್ ಜೋಶ್ವಾ ಸಂಗೀತ ನೀಡಿದ್ದಾರೆ. ಕನ್ನಡ ಭಾಷೆ ಕುರಿತ ಗೀತೆಗೆಸಂತೋಷ್ ನಾಯಕ್ ಸಾಹಿತ್ಯ ರಚಿಸಿದ್ದು, ರಘುದೀಕ್ಷಿತ್ ಕಂಠದಾನ ಮಾಡಿದ್ದಾರೆ. ನಾಲ್ಕು ಸಾಹಸ ದೃಶ್ಯಗಳಿಗೆ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ನಿರ್ದೇಶನವಿದೆ. ಸಂಕಲನ ವೆಂಕಿ, ನೃತ್ಯ ಧನಂಜಯ್-ಹರಿಕೃಷ್ಣ ಅವರದ್ದು. ಬೆಳಗಾವಿಯ ವಸಂತ್ಮುರಾರಿ ದಳವಾಯಿ ಅಕ್ಷಯ್ ಫಿಲ್ಮ್ ಮೇಕರ್ಸ್ ಮೂಲಕ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.