ಮೋವಿನ್ ಫಿಲಮ್ಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ತುಳು ಸಿನಿಮಾ ‘ಗೌಜಿ ಗಮ್ಮತ್’ ಶೀಘ್ರದಲ್ಲೇ ತೆರೆಕಾಣಲಿದೆ. ಸಂಕ್ರಾಂತಿಯಂದು ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರ್ಣ ಉದ್ಯಾವರ ಮೊದಲ ಬಾರಿಗೆ ನಾಯಕ ನಟನಾಗಿ ಇಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಉಡುಪಿಯ ಸ್ವಾತಿ ಶೆಟ್ಟಿ ಸಾಥ್ ನೀಡಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗವಿದ್ದು ಕರಾವಳಿಯ ಹಾಸ್ಯ ದಿಗ್ಗಜರೆಂದೇ ಖ್ಯಾತರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರು ಪ್ರೇಕ್ಷಕರಿಗೆ ನಗುವಿನೌತಣ ಬಡಿಸಲು ಸಜ್ಜಾಗಿದ್ದಾರೆ.

ಕೌಟುಂಬಿಕ, ಹಾಸ್ಯಭರಿತ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಮಣಿ ಎ.ಜೆ. ಕಾರ್ತಿಕೇಯನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ತುಳು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಇವರಿಗಿದೆ. ಹಲವು ಕನ್ನಡ, ತುಳು ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಸಂದೀಪ್ ಬೆದ್ರ ಈ ಸಿನಿಮಾಗೆ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ ಹಾಗೂ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ‘ಗೌಜಿ ಗಮ್ಮತ್’ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ತುಷಾರ್ ಸುರತ್ಕಲ್, ನಿರ್ದೇಶನ ತಂಡದಲ್ಲಿ ರಾಮದಾಸ್ ಸಸಿಹಿತ್ಲು, ಕರ್ಣ ಉದ್ಯಾವರ, ಗೌರವ್ ರೈ ಕಾರ್ಯನಿರ್ವಹಿಸಿದ್ದಾರೆ. ವಿ.ರಾಮಾಂಜನೇಯ ಛಾಯಾಗ್ರಹಣ, ಮೇವಿನ್ ಜೋಯಿಲ್ ಪಿಂಟೋ ಸಂಕಲನ ಸಿನಿಮಾಗಿದೆ.

ಚಿತ್ರದ ಹಾಡುಗಳಿಗೆ ಕಿಶೋರ್ ಮೂಡಬಿದ್ರೆ, ಮಯೂರ್, ಲೋಕು ಕುಡ್ಲ, ಸಂದೀಪ್ ಬೆದ್ರ ಸಾಹಿತ್ಯವಿದ್ದು, ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಸ್ಯಾಮೂವಲ್ ಎಬಿ ವಹಿಸಿಕೊಂಡಿದ್ದಾರೆ. ಉಡುಪಿ, ಮಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಚಂದ್ರಹಾಸ ಶೆಟ್ಟಿ ಮಾಣಿ, ಅಶ್ವಥ್ ಶೆಟ್ಟಿ, ಜಯಶೀಲ ಮರೋಳಿ, ಸುಜಾತ ಶಕ್ತಿನಗರ, ವನಿತಾ ಸುವರ್ಣ, ರಾಧಿಕ ಭಟ್, ಹರೀಶ್ ಚಂದ್ರ ಪೆರಾಡಿ, ಪ್ರಭಾಕರ್ ಬ್ರಹ್ಮಾವರ, ಕಿಶೋರ್ ಶೆಟ್ಟಿ ಪಿಲಾರ್, ಹರೀಶ್ ಪೂಜಾರಿ ಕಡ್ತಲ, ಅನುಷಾ ಶೆಟ್ಟಿ, ಲೋಕೇಶ್ ಮಾಣಿಲ, ಪ್ರಭಾಕರ ಆಚಾರ್ಯ ಮೂಡುಬೆಳ್ಳೆ, ಚಿತ್ರಿತಾ ದೇವಾಡಿಗ ಹಳೆಯಂಗಡಿ, ವಿಕ್ಕಿ ರಾವ್ ಮಿರ್ಚಿ, ಸಂದೇಶ್ ದೇವಾಡಿಗ, ಶಿವರಾಮ್ ವಿಟ್ಲ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.