ಬೆಂಗಳೂರು: 2015ರಲ್ಲಿ ತೆರೆಕಂಡಿದ್ದ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್ಜಾನ್ ಚಿತ್ರ, ಜನರ ಪ್ರಶಂಸೆಗೆ ಪಾತ್ರವಾಗಿತ್ತು.

ಸರಳ ಮತ್ತು ಆಪ್ತ ಕಥೆಯನ್ನೊಳಗೊಂಡ ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆಯನ್ನೂ ಕಂಡಿತ್ತು.

ಸಲ್ಲೂ ಬಾಯ್ ಜತೆಗೆ ಈ ಚಿತ್ರದಲ್ಲಿ ಕರೀನಾ ಕಪೂರ್, ನವಾಜುದ್ದೀನ್ ಸಿದ್ದಿಕಿ ಹಾಗೂ ಬಾಲನಟಿ ಹರ್ಷಾಲಿ ಮಲ್ಹೋತ್ರಾ ಅಭಿನಯಿಸಿದ್ದರು.

ಸಲ್ಮಾನ್ ಅವರು ಭಜರಂಗಿ ಭಾಯ್ಜಾನ್ ಚಿತ್ರದ ಮುಂದುವರಿದ ಭಾಗವನ್ನು ಮಾಡುತ್ತಿದ್ದು, ಅದರಲ್ಲಿ ತಮಗೂ ಒಂದು ಪಾತ್ರ ಇರಬಹುದು ಎಂದು ಹರ್ಷಾಲಿ ಮಲ್ಹೋತ್ರಾ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಕಬೀರ್ ಖಾನ್ ನಿರ್ದೇಶನದ ಈ ಚಿತ್ರಕ್ಕೆ ಕೆವಿ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು.

RRR: ರಾಜಮೌಳಿ ಸಿನಿಮಾದ ಬಜೆಟ್ ₹300 ಕೋಟಿಗೂ ಅಧಿಕ!

ಚಿತ್ರದ ಮುಂದಿನ ಭಾಗ ಶೀಘ್ರದಲ್ಲೇ ಸೆಟ್ಟೇರಲಿದ್ದು, ಅದರಲ್ಲಿ ಪಾತ್ರ ಮಾಡುವ ಬಯಕೆ ಇದೆ, ಅದಕ್ಕಾಗಿ ಸಲ್ಮಾನ್ ಖಾನ್ ಅಂಕಲ್ ಅವರ ಕರೆಗಾಗಿ ಕಾಯುತ್ತಿದ್ದೇನೆ ಎಂದು ಹರ್ಷಾಲಿ ಹೇಳಿದ್ದಾರೆ.

RRR: ಬಿಡುಗಡೆಯಾದ ಬೆನ್ನಲ್ಲೇ ಆನ್ಲೈನ್ನಲ್ಲಿ ಸೋರಿಕೆಯಾದ ರಾಜಮೌಳಿ ಸಿನಿಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.