ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಹೌಸ್‌ಪುಲ್‌ 5’ಗೆ ಸಂಜಯ್‌ ದತ್‌ ಎಂಟ್ರಿ

Published 19 ಜುಲೈ 2024, 23:36 IST
Last Updated 19 ಜುಲೈ 2024, 23:36 IST
ಅಕ್ಷರ ಗಾತ್ರ

ಬಾಲಿವುಡ್‌ನ ಬಹುನಿರೀಕ್ಷಿತ ಕಾಮಿಡಿ ಸಿನಿಮಾ ಹೌಸ್‌ಪುಲ್‌ 5ನಲ್ಲಿ ಸಂಜಯ್‌ ದತ್‌ ನಟಿಸಲಿದ್ದಾರೆ. ಹೌದು, ಅಕ್ಷಯ್‌ ಕುಮಾರ್‌, ಅಭಿಷೇಕ್ ಬಚ್ಚನ್, ರಿತೇಶ್ ದೇಶ್‌ಮುಖ್ ಮುಂತಾದ ಪ್ರಸಿದ್ಧ ನಟರಿರುವ ಹೌಸ್‌ಪುಲ್‌ 5 ಈಗಾಗಲೇ ಸಿನಿ ಪ್ರೇಮಿಗಳಲ್ಲಿ ನಿರೀಕ್ಷೆ ಹುಟ್ಟುಹಾಕಿದ್ದು, ಸಂಜಯ್ ದತ್ ಎಂಟ್ರಿ ಅಭಿಮಾನಿಗಳ ಕಾತರ ಜಾಸ್ತಿ ಮಾಡಿದೆ. 

ಬಾಲಿವುಡ್‌ನ ಪ್ರಸಿದ್ದ ಕಾಮಿಡಿ ಸಿಕ್ಷೆಲ್ ಹೌಸ್‌ಪುಲ್‌ ಮೊದಲ ಸಿನಿಮಾ 2010ರಲ್ಲಿ ತೆರೆಕಂಡಿತ್ತು. ಅಕ್ಷಯ್‌ ಕುಮಾರ್‌, ದಿಪೀಕಾ ಪಡುಕೋಣೆ ನಟಿಸಿದ್ದ ಸಿನಿಮಾ ಸೂಪರ್ ಹಿಟ್‌ ಆಗಿತ್ತು. ಹೌಸ್‌ಪುಲ್‌ 2,3,4 ಕೂಡ ಪ್ರೇಕ್ಷಕರ ಗಮನ ಸೆಳೆದಿದ್ದವು.

‘‘ಸಂಜಯ್ ದತ್ ಅಭಿಮಾನಿಗಳಿಗೊಂದು ಖುಷಿ ಸುದ್ದಿಯಿದೆ. ಹೌಸ್‌ಪುಲ್‌ 5ರಲ್ಲಿ ದತ್‌ ಕಾಣಿಸಿಕೊಳ್ಳಲಿದ್ದಾರೆ’’ ಎಂದು ನಿರ್ಮಾಣ ಸಂಸ್ಥೆ ನಾಡಿಯಾವಾಲಾ  ಗ್ರ್ಯಾಂಡ್‌ಸನ್‌ ಎಂಟರ್‌ಟೇನ್ಮೆಂಟ್‌(ಎನ್‌ಜಿಇ), ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಈಚೆಗೆ ತಿಳಿಸಿದೆ. ನಿರ್ಮಾಪಕ ಸಾಜಿದ್‌ ನಾಡಿಯಾವಾಲಾ ಜೊತೆಗೆ ಸಂಜಯ್‌ ದತ್‌ ಪೋಸ್‌ ಕೊಡುತ್ತಿರುವ ಚಿತ್ರವನ್ನು ಪೋಸ್ಟ್‌ ಮಾಡಲಾಗಿದೆ. ಮತ್ತೊಂದು ಕಾಮಿಡಿ ಜರ್ನಿಗೆ ಎದುರುನೋಡುತ್ತಿದ್ದೇವೆ ಎಂದು ಹಾಕಿದ್ದಾರೆ. ಕಾಮೆಂಟ್‌ನಲ್ಲಿ ದತ್‌ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಶಾರುಖ್ ಖಾನ್‌ ನಟನೆಯ ಜವಾನ್‌ ಸಿನಿಮಾದಲ್ಲಿ ಸಂಜಯ್‌ ದತ್‌ ಕಾಣಿಸಿಕೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT