ಸ್ವಜನ ಪಕ್ಷಪಾತ ಮತ್ತು ಸಮಾನ ವೇತನ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಆಗಾಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಕೂಡಾ ಬಾಲಿವುಡ್‌ನಲ್ಲಿ ‘ಸಮಾನ ವೇತನ‘ ನೀಡದಿರುವುದರ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಇದೀಗ ಕಂಗನಾ ರನೌತ್ ಈ ವಿಚಾರದ ಬಗ್ಗೆ ಮಾತನಾಡಿದ್ದು, ‘ಬಾಲಿವುಡ್ ನಟಿಯರ ಪೈಕಿ ನಾನೊಬ್ಬಳೆ ನಟರಷ್ಟೆ ಸಂಭಾವನೆ ಪಡೆಯುತ್ತಿದ್ದೆ‘ ಎಂದು ಹೇಳಿಕೊಂಡಿದ್ದಾರೆ.

ಹಾಲಿವುಡ್‌ನಲ್ಲಿ ತನ್ನದೇ ಚಾಪು ಮೂಡಿಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ, ಬಾಲಿವುಡ್‌ನಿಂದ ದೂರವಾಗಲು ಹಲವಾರು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಇತ್ತೀಚೆಗೆ ಟಾಕ್ ಶೋವೊಂದರಲ್ಲಿ ಮಾತನಾಡುತ್ತಾ ಸಮಾನ ವೇತನ(Pay Parity) ನೀಡದಿರುವುದು ಕೂಡ ತಾವು ಬಾಲಿವುಡ್ ಬಿಡಲು ಕಾರಣವಾಗಿದೆ ಎಂದು ಹೇಳಿದ್ದರು. 60 ಸಿನಿಮಾಗಳನ್ನು ಮಾಡಿದರೂ ಸಹ ನನಗೆ ನಟನ ಸಂಭಾವನೆಯ ಶೇಕಡ 10ರಷ್ಟು ನೀಡುತ್ತಿದ್ದರು ಎಂದು ಅಸಮಾಧಾನ ಹೊರಹಾಕಿದ್ದರು. ಪ್ರಿಯಾಂಕ ಚೋಪ್ರಾ ಅವರ ಈ ವಿಡಿಯೊ ತುಣುಕನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿರುವ ಕಂಗನಾ ರನೌತ್ ತಮ್ಮ ಅನಿಸಿಕೆಯನ್ನು ಬರೆದುಕೊಂಡಿದ್ದಾರೆ.

‘ಇದು ನಿಜ.. ಹಿಂದಿನವರು ಇಂತಹ ಪುರುಷ ಸಮಾಜದ ವೇತನ ಅಸಮಾನತೆಯನ್ನು ಒಪ್ಪಿಕೊಂಡು ಹೋಗುತ್ತಿದ್ದರು. ಬಾಲಿವುಡ್‌ನಲ್ಲಿ ಸಮಾನ ವೇತನಕ್ಕಾಗಿ ಹೋರಾಟ ಮಾಡಿದ ಮೊದಲ ನಟಿ ನಾನೆ. ಸಮಾನ ವೇತನಕ್ಕಾಗಿ ನಾನು ಹೋರಾಟ ಮಾಡುತ್ತಿರುವ ಸಮಯದಲ್ಲಿಯೇ ಕೆಲವು ನಟಿಯರು ನನಗೆ ಬಂದ ಪಾತ್ರವನ್ನು ವೇತನ ಪಡೆಯದೆ ಮಾಡುತ್ತಿದ್ದರು. ಕೆಲವೊಮ್ಮೆ ತಮಗೆ ಸಿಕ್ಕ ಪಾತ್ರ ಬೇರೆ ನಟಿಯರಿಗೆ ಹೋಗಬಹುದೆಂಬ ಭಯದಲ್ಲಿಯೇ ಹೆಚ್ಚಿನ ಎ–ಲಿಸ್ಟರ್(ಜನಪ್ರಿಯ) ನಟಿಯರು ಸಂಭಾವನೆ ಪಡೆಯದೆ ಸಿನಿಮಾಗಳನ್ನು ಮಾಡುತ್ತಿದ್ದರು. ನಂತರ ‘ಹೆಚ್ಚು ಸಂಭಾವನೆ ಪಡೆದ ನಟಿ‘ ಎಂಬ ಲೇಖನಗಳನ್ನು ಬರೆಸಿಕೊಂಡು ಬಿಡುಗಡೆ ಮಾಡುತ್ತಿದ್ದರು‘ ಎಂದು ಪರೋಕ್ಷವಾಗಿ ಪ್ರಿಯಾಂಕಾ ಚೋಪ್ರಾಗೆ ಟಾಂಗ್ ನೀಡಿದ್ದಾರೆ.

‘ಬಾಲಿವುಡ್ ಚಿತ್ರರಂಗದಲ್ಲಿ ನಟರಷ್ಟೆ ಸಂಭಾವನೆ ಪಡೆಯುತ್ತಿದ್ದ ನಟಿ ನಾನೊಬ್ಬಳೆ ಎಂದು ಎಲ್ಲರಿಗೂ ಗೊತ್ತು. ಬೇರೆ ಯಾವ ನಟಿಯೂ ಸಮಾನ ವೇತನ ಪಡೆಯುತ್ತಿರಲಿಲ್ಲ‘ ಎಂದು ಹೇಳಿದ್ದಾರೆ.

ಕಂಗನಾ ರನೌತ್ ಸದ್ಯ ತಮ್ಮ ಬಹುನಿರೀಕ್ಷಿತ ‘ಎಮರ್ಜನ್ಸಿ‘ ಸಿನಿಮಾದ ಮೇಕಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ನ ಸ್ವಜನಪಕ್ಷಪಾತದ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಿದವರಲ್ಲಿ ಕಂಗನಾ ರನೌತ್ ಮುಂಚೂಣಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.