ವಾಷಿಂಗ್ಟನ್: ಬಾಲಿವುಡ್ ಬಿಗ್ ಬಿ, ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ, ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ.

79 ವರ್ಷದ ಬಚ್ಚನ್ ಅವರ ದೊಡ್ಡ ಅಭಿಮಾನಿಯಾಗಿರುವ ಭಾರತೀಯ ಮೂಲದ ಅಮೆರಿಕದ ಟೆಕ್ಕಿಯೊಬ್ಬರು ಬರೋಬ್ಬರಿ ₹60 ಲಕ್ಷ ಖರ್ಚು ಮಾಡಿ ಮನೆ ಮುಂದೆ ಅವರ ಪ್ರತಿಮೆ ನಿಲ್ಲಿಸಿದ್ದಾರೆ. ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿನ ಅಮಿತಾಭ್ ಅವರ ಭಂಗಿಯನ್ನು ಈ ಪ್ರತಿಮೆಗೆ ಬಳಸಿಕೊಳ್ಳಲಾಗಿದೆ.

ನ್ಯೂಜೆರ್ಸಿಯಲ್ಲಿರುವ ಈಡಿಸನ್ ಸಿಟಿಯಲ್ಲಿ ವಾಸವಾಗಿರುವ ಇಂಟರ್‌ನೆಟ್ ಸೆಕ್ಯೂರಿಟಿ ಎಂಜಿನಿಯರ್ ಗೋಪಿ ಸೇಠ್ ಅವರು, ವಿವಿಧ ವಿಶೇಷ ಲೋಹಗಳಿಂದ ಮಾಡಿರುವ ಅಮಿತಾಭ್ ಅವರ ಪ್ರತಿಮೆಯನ್ನು ಮನೆ ಮುಂದೆ ಪ್ರತಿಷ್ಠಾಪಿಸಿದ್ದಾರೆ. ಈ ಕಾರ್ಯಕ್ಕೆ ಅವರ ಪತ್ನಿ ರಿಂಕು ಸೇಠ್ ನೆರವಾಗಿದ್ದಾರೆ.

ಭಾನುವಾರ ಗೋಪಿ ಅವರ ಮನೆ ಮುಂದೆ ನೂರಾರು ಅಮಿತಾಭ್ ಅಭಿಮಾನಿಗಳು ಸೇರಿಕೊಂಡು ಪ್ರತಿಮೆ ಪ್ರತಿಷ್ಠಾಪನೆಯನ್ನು ಸಂಭ್ರಮದಿಂದ ನೆರವೇರಿಸಿದರು. ಈ ವೇಳೆ ಪಟಾಕಿ ಹೊಡೆದು, ಅಮಿತಾಭ್ ಸೂಪರ್‌ಹಿಟ್ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗೋಪಿ ಅವರು, ‘ಅಮಿತಾಭ್ ಬಚ್ಚನ್ ಅವರು ನನಗೆ ಹಾಗೂ ನನ್ನ ಪತ್ನಿಗೆ ದೇವರಿಗೆ ಸಮಾನ’ ಎಂದಿದ್ದಾರೆ.

‘ನಾವು ಅವರ ರೀಲ್ ಲೈಫ್‌ನಿಂದ ಮಾತ್ರ ಪ್ರಭಾವಿತವಾಗಿಲ್ಲ. ಅವರ ರಿಯಲ್ ಲೈಫ್‌ನಿಂದಲೂ ಸಾಕಷ್ಟು ಪ್ರಭಾವಿತರಾಗಿದ್ದೇವೆ. ಅವರು ಸಾರ್ವಜನಿಕರೊಂದಿಗೆ ನಡೆದುಕೊಳ್ಳುವುದು, ಅಭಿಮಾನಿಗಳಿಗೆ ಸ್ಪಂದಿಸುವುದು ನಮಗೆ ತುಂಬಾ ಇಷ್ಟವಾಗುತ್ತದೆ. ಬೇರೆ ಕೆಲ ನಟರ ರೀತಿ ಅವರಲ್ಲ’ ಎಂದು ಕೊಂಡಾಡಿದ್ದಾರೆ.

‘ನಾನು ಪ್ರತಿಮೆ ಸ್ಥಾಪಿಸಿಸುತ್ತಿದ್ದ ವಿಚಾರ ಅಮಿತಾಭ್ ಅವರಿಗೆ ತಿಳಿದಿತ್ತು. ಅವರು ಬೇಡ ಅಂದರು, ಆದರೆ, ನಾವು ಈ ವಿಷಯದಲ್ಲಿ ಅವರ ಮಾತು ಕೇಳಲು ಆಗಲಿಲ್ಲ’ ಎಂದಿದ್ದಾರೆ ಗೋಪಿ.

ಗುಜರಾತ್‌ನ ದಾಹೋದ್‌ನಿಂದ 1990ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದ ಗೋಪಿ ಸೇಠ್ ಅವರು ಅಮಿತಾಬ್ ಅವರಿಗಾಗಿಯೇ ‘ಬಿಗ್ ಬಿ ಫ್ಯಾಮಿಲಿ’ ಎಂಬ ವೆಬ್‌ಸೈಟ್ ಒಂದನ್ನು ನಡೆಸುತ್ತಿದ್ದಾರೆ.

ದೃಶ್ಯಂ–3 ಸಿನಿಮಾ ಘೋಷಣೆ ಮಾಡಿದ ನಿರ್ಮಾಪಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.