ಹದಿಮೂರು ವರ್ಷಗಳ ನಂತರ 'ಅವತಾರ್' ಸಿನಿಮಾದ ಮುಂದುವರಿದ ಭಾಗ ಬಿಡುಗಡೆ ಸಜ್ಜಾಗಿದೆ. ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ 'ಅವತಾರ್: ದಿ ವೇ ಆಫ್ ವಾಟರ್' ಚಿತ್ರದ ಇಂದು ಹೊರ ಬಂದಿದ್ದು, ಸಿನಿಮಾ ಪ್ರಿಯರು ದೃಶ್ಯ ವೈಭವ ಕಂಡು ನಿಬ್ಬೆರಗಾಗಿದ್ದಾರೆ.

ಏಪ್ರಿಲ್ 27ರಂದು ಲಾಸ್ ವೇಗಸ್‌ನ 'ಸಿನಿಮಾಕಾನ್' ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಇದನ್ನು ಪ್ರದರ್ಶಿಸಲಾಗಿತ್ತು. ಇದೀಗ ಯುಟ್ಯೂಬ್ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಭೂಮಿಯಂತೆ ಕಾಣುವ, ಮತ್ತಷ್ಟು ಸುಂದರವಾದ ಪ್ಯಾಂಡೊರಾ ಜಗತ್ತಿನಲ್ಲಿ ವಾಸಿಸುವ 'ನಾವಿ' ಜೀವಿಗಳ ಕುಟುಂಬ ಇಲ್ಲಿ ಮತ್ತುಷ್ಟು ವಿಸ್ತಾರಗೊಂಡಿದೆ. ಅವರೊಂದಿಗೆ ಬೆಸೆದುಕೊಂಡಿರುವ ಹಾರುವ ಜೀವಿಗಳ ಜೊತೆಗೆ ಇಲ್ಲಿ ಈಜುವ ವಿಶೇಷ ಜಲಚರಗಳ ದರ್ಶನವೂ ಆಗುತ್ತದೆ. ನೀರಿನೊಳಗೆ, ಮೇಲೆ,...ಹೀಗೆ ನೀರು ಇಲ್ಲಿನ ಕಥಾ ವಸ್ತು ಆಗಿರುವಂತೆ ತೋರುತ್ತಿದೆ.

'ನಾವು ಎಲ್ಲಿಗೇ ಹೋದರೂ, ಈ ಕುಟುಂಬವು ನಮ್ಮ ರಕ್ಷಾ ಕವಚ'– ಇದೊಂದು ಡೈಲಾಗ್ ಮಾತ್ರವೇ ಟ್ರೇಲರ್‌ನಲ್ಲಿ ಕೇಳಲು ಸಿಗುತ್ತದೆ.

2009ರಲ್ಲಿ ಬಿಡುಗಡೆಯಾಗಿದ್ದ ಅವತಾರ್ ಚಿತ್ರವು ಜಗತ್ತಿನಾದ್ಯಂತ ಸಂಚಲನ ಮೂಡಿಸಿತ್ತು. 20 ಸಾವಿರ ಕೋಟಿ ರೂಪಾಯಿಗೂ ಅಧಿಕ ಗಳಿಕೆ ದಾಖಲಿಸಿತ್ತು. ಚಿತ್ರದ ಎರಡನೇ ಭಾಗವು 2022ರ ಡಿಸೆಂಬರ್ 16ರಂದು ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.