‘ಬೋಲಾ’ ಆನೆ ಜೊತೆಗಿನ ಪ್ರೀತಿಯ ಸಂಬಂಧ, ಕಾಡಿಗೆ ಬರುವ ಆಪತ್ತನ್ನು ರಕ್ಷಿಸುವ ಹೊಣೆ ಹೀಗೆ ಸಾಕಷ್ಟು ಆ್ಯಕ್ಷನ್, ಥ್ರಿಲ್ಲರ್ ಅನುಭವ ನೀಡುವ ಕಥೆಯೇ ‘ಜಂಗ್ಲಿ’.

ಇದೇ ಮಾರ್ಚ್ 29ಕ್ಕೆ ಬಿಡುಗಡೆಯಾಗಲಿದೆ. ಫಿಟ್ ಹೀರೊ ಎಂದೇ ಗುರುತಿಸಿಕೊಂಡಿರುವ ವಿದ್ಯುತ್ ಜಾಮ್‌ವಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಮೆರಿಕದ ಚುಕ್ ರಸೆಲ್ ನಿರ್ದೇಶನವಿದೆ. ಪೂಜಾ ಸಾವಂತ್, ಆಶಾ ಭಟ್ ನಟಿಸಿದ್ದಾರೆ.

ಬಹುಭಾಷಾ ನಟ ಅತುಲ್ ಕುಲಕರ್ಣಿ ‘ಗನ್‘ ಹಿಡಿದು ಸೆಣಸುವ ದೃಶ್ಯಗಳು ಟ್ರೇಲರ್‌ನಿಂದಾಗಿ ಈಗಾಗಲೇ ಅಭಿಮಾನಿಗಳ ಮನಸ್ಸು ಗೆದ್ದಿವೆ. ಮಕರಂದ್ ದೇಶ್‌ಪಾಂಡೆ ಕೂಡ ನಟಿಸಿದ್ದಾರೆ.

ಜಂಗ್ಲಿ ಪಿಕ್ಚರ್ಸ್‌ನ ವಿನೀತ್ ಜೈನ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಶುವೈದ್ಯನಾಗಿರುವ ನಾಯಕ, ತಂದೆ ಇರುವ ಜಾಗಕ್ಕೆ ಬಂದಾಗ ಆತ ಎದುರಿಸುವ ವಿಭಿನ್ನ ಸಮಸ್ಯೆಗಳ ಸುತ್ತ ಚಿತ್ರಕಥೆಯನ್ನು ಹೆಣೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.