ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಜಸ್ಟ್‌ ಮ್ಯಾರೀಡ್‌’ ಟೀಸರ್‌ ಬಿಡುಗಡೆ

Published : 7 ಅಕ್ಟೋಬರ್ 2024, 23:30 IST
Last Updated : 7 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಟಿ ಅಂಕಿತಾ ಅಮರ್‌ ನಟನೆಯ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಬಿಗ್‌ಬಾಸ್‌’ ಖ್ಯಾತಿಯ ನಟ ಶೈನ್‌ ಶೆಟ್ಟಿ ನಾಯಕರಾಗಿ ನಟಿಸಿರುವ ‘ಜಸ್ಟ್‌ ಮ್ಯಾರೀಡ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. 

ಎಬಿಬಿಎಸ್ ಸ್ಟುಡಿಯೊಸ್‌ ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ನಿರ್ಮಿಸಿರುವ, ಸಿ.ಆರ್.ಬಾಬಿ ಅವರ ನಿರ್ದೇಶನದ ಈ ಸಿನಿಮಾದ ಟೀಸರ್‌ ಅನ್ನು ನಿರ್ದೇಶಕರಾದ ಉಪೇಂದ್ರ, ನಿಥಿಲನ್ ಹಾಗೂ ಅಜಯ್ ಭೂಪತಿ ಜೊತೆಯಾಗಿ ಬಿಡುಗಡೆಗೊಳಿಸಿದರು. ‘ಸಿನಿಮಾ ನಿರ್ದೇಶನ ಬಹುವರ್ಷಗಳ ಕನಸು’ ಎಂದು ಮಾತು ಆರಂಭಿಸಿದ ನಿರ್ದೇಶಕಿ ಸಿ.ಆರ್ ಬಾಬಿ, ‘ನನ್ನ ಮೊದಲ ‌ನಿರ್ದೇಶನದ ಚಿತ್ರವನ್ನು ಅಜನೀಶ್ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ‘ಜಸ್ಟ್ ಮ್ಯಾರೀಡ್’ ತೆರೆಕಾಣಲಿದೆ’ ಎಂದರು. 

‘ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಬಾಬಿ ಹಾಗೂ ಅಜನೀಶ್ ಅವರು ಈ ಚಿತ್ರದ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ನಟಿ ಅಂಕಿತ ಅಮರ್ ಅವರ ಕ‌ನ್ನಡ ಹಾಗೂ ನಟನೆ ಎರಡೂ ಚೆಂದ’ ಎಂದರು ಶೈನ್ ಶೆಟ್ಟಿ. ‘ಸಹನ’ ಎಂಬ ಪಾತ್ರದಲ್ಲಿ ಅಂಕಿತಾ ಅಮರ್‌ ನಟಿಸಿದ್ದು, ನಟಿ ಶ್ರುತಿ‌, ದೇವರಾಜ್‌, ರವಿಶಂಕರ್ ಗೌಡ, ಶ್ರೀಮಾನ್, ವಾಣಿ ಹರಿಕೃಷ್ಣ, ಸಾಕ್ಷಿ ಅಗರವಾಲ್, ಅಚ್ಯುತ್‌ ಕುಮಾರ್‌, ಶೃತಿ ಹರಿಹರನ್‌, ಅನೂಪ್‌ ಭಂಡಾರಿ ಹೀಗೆ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆಯಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT