ಕರಣ್ ಜೋಹರ್ ನಿರ್ಮಾಣದ ಶೇರ್‌ಷಾ ಚಿತ್ರವನ್ನು 'ಅದ್ಬುತ ಗೌರವ ಸಲ್ಲಿಕೆ' ಎಂದು ನಟಿ ಕಂಗನಾ ಹೊಗಳಿದ್ದಾರೆ.

'ರಾಷ್ಟ್ರ ನಾಯಕ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹಿಮಾಚಲದ ಹುಡುಗ. ಅತ್ಯಂತ ಜನಪ್ರಿಯ ಮತ್ತು ಪ್ರೀತಿಯ ಯೋಧ. ಅವರ ಸಾವಿನ ಸುದ್ದಿ ಹಿಮಾಚಲದಲ್ಲಿ ಕಾಳ್ಗಿಚ್ಚಿನಂತೆ ಹರಡಿತು. ಅದು ನಮ್ಮ ಹೃದಯದಲ್ಲಿ ಉಳಿದುಹೋಗಿದೆ' ಎಂದು ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಕಂಗನಾ ಬರೆದುಕೊಂಡಿದ್ದಾರೆ.

'ಎಂತಹ ಅದ್ಭುತ ಗೌರವ ಸಲ್ಲಿಕೆ. ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು. ಇದು ದೊಡ್ಡ ಜವಾಬ್ದಾರಿ ಮತ್ತು ಇದರಿಂದ ನೀವೆಲ್ಲರೂ ಶ್ರೇಷ್ಠರಾಗಿದ್ದೀರಿ' ಎಂದು ಕಂಗನಾ ತಮ್ಮ ಎರಡನೇ ಸ್ಟೇಟಸ್‌ನಲ್ಲಿ ತಿಳಿಸಿದ್ದಾರೆ.

ಸಿದ್ಧಾರ್ಥ್ ಅವರು ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ನಟಿ ಕಿಯಾರ ಅಡ್ವಾಣಿ ಸಿದ್ಧಾರ್ಥ್ ಅವರಿಗೆ ಜೊತೆಯಾಗಿದ್ದಾರೆ. ‘ಶೇರ್‌ಷಾ’ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿದೆ.

ಮರಣೋತ್ತರವಾಗಿ ವಿಕ್ರಂ ಬಾತ್ರಾ ಅವರಿಗೆ ಪರಮ ವೀರ ಚಕ್ರ ಶೌರ್ಯ ಪ್ರಶಸ್ತಿ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.