ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Kannada Cinema: ಸೆ.27 ಕ್ಕೆ ‘ಲುಕ್ ಬ್ಯಾಕ್’ ತೆರೆಗೆ

Published : 19 ಸೆಪ್ಟೆಂಬರ್ 2024, 18:53 IST
Last Updated : 19 ಸೆಪ್ಟೆಂಬರ್ 2024, 18:53 IST
ಫಾಲೋ ಮಾಡಿ
Comments

ಕೇರಳದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಸಮರ ಕಲೆ ಕಳರಿಪಯಟ್ಟು ಕುರಿತಾದ ‘ಲುಕ್ ಬ್ಯಾಕ್’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೆ ಬಿಡುಗಡೆಗೊಂಡಿದೆ. ಕನ್ನಡ, ಮಲಯಾಳ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಸಿನಿಮಾ ತಯಾರಾಗಿದ್ದು, ಕರ್ನಾಟಕ ಮತ್ತು ಕೇರಳದಲ್ಲಿ ಸೆಪ್ಟೆಂಬರ್ 27ರಂದು ಚಿತ್ರ ತೆರೆ ಕಾಣಲಿದೆ.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ ‘ಭಾರತೀಯ ಪ್ರಾಚೀನ ಕಲೆಯ ಸಿನಿಮಾ ಮಾಡಿರುವ ಉದ್ದೇಶ ಚೆನ್ನಾಗಿದೆ. ಹೀಗಾಗಿ ಹಾಡುಗಳಿಗೆ ಸಂಗೀತ ಸಂಯೋಜಿಸಿ ಕೊಟ್ಟಿದ್ದೇನೆ. ಕಳರಿ ಅಂದರೆ ಕಳೆಯನ್ನು ಕಿತ್ತು ಹಾಕು ಎಂದರ್ಥ. ಮೈಮೇಲೆ, ಮನಸಿನ ಮೇಲೆ ಅರಿವಿರಬೇಕು ಎಂಬುದು ಚಿತ್ರದ ಆಶಯವಾಗಿದೆ. ಪ್ರತೀಕಾರದ ಕಥೆ ಒಳಗೊಂಡಿದ್ದು, ಕ್ಲೈಮ್ಯಾಕ್ಸ್‌ ವಿಭಿನ್ನವಾಗಿದೆ. ಇಂದಿನ ಹೆಣ್ಣು ಮಕ್ಕಳು ರಕ್ಷಣೆಗೆ ದೃಷ್ಟಿಯಿಂದ ಈ ಕಲೆಯನ್ನು ಕಲಿಯಬೇಕು’ ಎಂದರು.

ಈ ಚಿತ್ರವನ್ನು ರಂಜನ್ ಮುಲಾರತ್ ನಟಿಸಿ, ನಿರ್ದೇಶಿಸಿದ್ದಾರೆ. ‘ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಸಿನಿಮಾ. ಎಲ್ಲ ಸಂಕಷ್ಟಗಳನ್ನು ದಾಟಿ ಬಿಡುಗಡೆ ಹಂತಕ್ಕೆ ಬಂದಿದೆ. ಚಿತ್ರದಲ್ಲಿ ಕಳರಿಪಯಟ್ಟು ಕಲೆಯೇ ಹೀರೊ ಎನ್ನಬಹುದು. ಕಳರಿಪಯಟ್ಟು ಕಲೆಯಲ್ಲಿ ಪದ್ಮಶ್ರೀ ಪುರಸ್ಕೃತ 84 ವರ್ಷ ವಯಸ್ಸಿನ ಮೀನಾಕ್ಷಿಯಮ್ಮ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಚಿತ್ರದ ಹೃದಯ ಸಂಗೀತ ಎನ್ನಬಹುದು. ಹಂಸಲೇಖ ಸೇರಿದಂತೆ ನಾಲ್ಕು ವಿದೇಶಿ ಸಂಗೀತ ನಿರ್ದೇಶಕರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ’ ಎಂದು ಚಿತ್ರದ ಕುರಿತು ಮಾಹಿತಿ ನೀಡಿದರು ನಿರ್ದೇಶಕರು.

ಚಿತ್ರದ ನಾಯಕಿಯಾಗಿ ಉಪಾಸನಾ ಗುರ್ಜನ್ ಕಾಣಿಸಿಕೊಂಡಿದ್ದಾರೆ. ಕೃಷ್ಣ ನಾಯಕರ್ ಛಾಯಾಚಿತ್ರಗ್ರಹಣವಿದೆ. ಕೇರಳ ಹಾಗೂ ಆಗುಂಬೆಯಲ್ಲಿ ಚಿತ್ರೀಕರಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT