ಯುಗಾದಿ ಆಗಮನಕ್ಕೆ ಮುನ್ನವೇ ರಾಜ್ಯದ ಚಿತ್ರಮಂದಿರಗಳಲ್ಲಿ ಸಿನಿಹಬ್ಬ ಆರಂಭವಾಗಿದೆ. ಕಳೆದ ಶುಕ್ರವಾರ(ಫೆ.10) ಹತ್ತಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿದ್ದವು. ಇಂದೂ (ಫೆ.17) ಸಾಲು ಸಾಲು ಸಿನಿಮಾಗಳು ತೆರೆಗೆ ಬಂದಿವೆ.

‘ಲವ್ ಬರ್ಡ್ಸ್’: ಪಿ.ಸಿ. ಶೇಖರ್ ಆ್ಯಕ್ಷನ್ ಕಟ್ ಹೇಳುತ್ತಿರುವ, ಕಡ್ಡಿಪುಡಿ ಚಂದ್ರು ಅವರ ನಿರ್ಮಾಣದ ‘ಲವ್ ಬರ್ಡ್ಸ್’ ಮೂಲಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಜೋಡಿ ಮತ್ತೆ ತೆರೆ ಮೇಲೆ ಬಂದಿದೆ. ‘ಲವ್ ಮಾಕ್ಟೇಲ್’ ಸಿನಿಮಾ ಸರಣಿ ಬಳಿಕ ಕೃಷ್ಣ ಹಾಗೂ ಮಿಲನ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ಮಿಲನ ಫ್ಯಾಷನ್ ಡಿಸೈನರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೃಷ್ಣ ಸಾಫ್ಟ್ವೇರ್ ಉದ್ಯೋಗಿಯಾಗಿ ಕಾಣಿಸಿಕೊಂಡಿದ್ದಾರೆ. ಮದುವೆಯ ನಂತರದ ಗಂಡ–ಹೆಂಡತಿಯ ಸಂಬಂಧದ ಕಥಾಹಂದರವನ್ನು ಈ ಚಿತ್ರವು ಹೊಂದಿದೆ.

‘ಎಸ್.ಎಲ್.ವಿ’: ಸೌರಭ್ ಕುಲಕರ್ಣಿ ನಿರ್ದೇಶನದ ‘ಎಸ್.ಎಲ್.ವಿ’ ಅಂದರೆ ‘ಸಿರಿ ಲಂಬೋದರ ವಿವಾಹ’ ತೆರೆಕಂಡಿದೆ. ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಸೌರಭ್ ಅವರ ಚೊಚ್ಚಲ ಸಿನಿಮಾ ಇದಾಗಿದೆ. ‘ಸಿರಿ–ಲಂಬೋದರ’ ಎನ್ನುವುದು ನಾಯಕ-ನಾಯಕಿಯ ಹೆಸರಲ್ಲ. ಅವರಿಬ್ಬರೂ ರಾಜಕಾರಣಿಗಳ ಮಕ್ಕಳು. ವೆಡ್ಡಿಂಗ್ ಪ್ಲಾನರ್ಸ್ಗಳಾದ ನಾಯಕ-ನಾಯಕಿ, ಇವರ ಮದುವೆ ಮಾಡಿಸುವುದಕ್ಕೆ ಮುಂದಾಗುತ್ತಾರೆ. ಈ ಪಯಣವೇ ಚಿತ್ರದ ಕಥಾಹಂದರ’ ಎಂದಿದ್ದಾರೆ ಸೌರಭ್. ಚಿತ್ರದಲ್ಲಿ ಅಂಜನ್ ಭಾರದ್ವಾಜ್ ಹಾಗೂ ದಿಶಾ ರಮೇಶ್ ನಾಯಕ–ನಾಯಕಿಯಾಗಿ ನಟಿಸಿದ್ದು, ರಾಜೇಶ್ ನಟರಂಗ, ಸುಂದರ್ ವೀಣಾ ಮುಂತಾದವರು ತಾರಾಗಣದಲ್ಲಿದ್ದಾರೆ.

‘ದೊಡ್ಡಹಟ್ಟಿ ಬೋರೇಗೌಡ’: ಚಂದನವನದಲ್ಲಿ ಸದ್ದು ಮಾಡಿದ್ದ ‘ತರ್ಲೆ ವಿಲೇಜ್’ ಸಿನಿಮಾದ ನಿರ್ದೇಶಕ ಕೆ.ಎಂ.ರಘು ಆ್ಯಕ್ಷನ್ ಕಟ್ ಹೇಳಿರುವ ಮತ್ತೊಂದು ಗ್ರಾಮೀಣ ಸೊಗಡಿನ ಸಿನಿಮಾ ‘ದೊಡ್ಡಹಟ್ಟಿ ಬೋರೇಗೌಡ’. ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಈ ಸಿನಿಮಾ, ಗ್ರಾಮವೊಂದರಲ್ಲಿ ನಡೆಯುವ ಕಥಾಹಂದರವನ್ನು ಹೊಂದಿದೆ. ಬಡವನೊಬ್ಬ ಮನೆ ಕಟ್ಟಿಕೊಳ್ಳಬೇಕಾದರೆ ಏನೆಲ್ಲಾ ಪಡಿಪಾಟಲು ಅನುಭವಿಸುತ್ತಾನೆ ಎನ್ನುವುದನ್ನು ಹೇಳಿದೆ ಈ ಚಿತ್ರ. ಭ್ರಷ್ಟಾಚಾರ, ಆಡಳಿತ ವ್ಯವಸ್ಥೆಯ ದುರವಸ್ಥೆಯ ನಡುವೆ ಬೋರೇಗೌಡ ಎಂಬಾತ ಮನೆ ಕಟ್ಟಿದನೇ ಇಲ್ಲವೇ ಎನ್ನುವುದೇ ಚಿತ್ರಕಥೆ. ಶಿವಣ್ಣ ಬೀರಹುಂಡಿ, ಗೀತಾ, ಸಂಪತ್ ಮುಂತಾದವರು ತಾರಾಗಣದಲ್ಲಿದ್ದಾರೆ.

‘ಖೆಯೊಸ್’: ಮನುಷ್ಯನ ಮನಸ್ಸಿನಲ್ಲಾಗುವ ಗೊಂದಲ, ಮನಸ್ಥಿತಿಯ ಬಗ್ಗೆ ಹೇಳುವ ಕಥಾಹಂದರ ಹೊಂದಿರುವ ಚಿತ್ರ ಖೆಯೊಸ್. ಅಕ್ಷಿತ್ ಶಶಿಕುಮಾರ್ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ನಾಯಕಿಯಾಗಿ ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ. ಶಶಿಕುಮಾರ್ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಅಪ್ಪ, ಮಗ ಮೊದಲ ಬಾರಿಗೆ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಜಿ.ವಿ.ಪ್ರಸಾದ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವೈದ್ಯಕೀಯ ಕಾಲೇಜೊಂದರಲ್ಲಿ ನಡೆಯುವ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದು, ಅಕ್ಷಿತ್ ಹಾಗೂ ಅದಿತಿ ಇಬ್ಬರೂ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಒಂದೊಳ್ಳೆ ಲವ್ ಸ್ಟೋರಿ’: ಹೊಸ ಪ್ರತಿಭೆಗಳು ಸೇರಿಕೊಂಡು ಸಿದ್ಧಪಡಿಸಿರುವ ಚಿತ್ರ ‘ಒಂದೊಳ್ಳೆ ಲವ್ ಸ್ಟೋರಿ’. ಮೈಸೂರಿನ ನಿರಂಜನ್ಬಾಬು ಚಿತ್ರದ ನಿರ್ಮಾಪಕರು. ಜೊತೆಗೆ ನಾಯಕನ ತಂದೆ ಪಾತ್ರಕ್ಕೂ ಅವರು ಬಣ್ಣ ಹಚ್ಚಿದ್ದಾರೆ. ಕಥೆ,ಚಿತ್ರಕಥೆ ಬರೆದು ನಾಯಕನಾಗಿ ಅಶ್ವಿನ್ ಅಭಿನಯಿಸಿದ್ದಾರೆ. ‘ಬಿಗ್ಬಾಸ್’ ಖ್ಯಾತಿಯ ಧನುಶ್ರೀ, ನಿಶಾ ಹೆಗಡೆ ಚಿತ್ರದ ನಾಯಕಿಯರು.

‘ಸಕೂಚಿ’: ಮಾಟ-ಮಂತ್ರದ ಕುರಿತಾದ ಸಿನಿಮಾಗಳ ಪಟ್ಟಿಗೆ ಹೊಸ ಸೇರ್ಪಡೆ ‘ಸಕೂಚಿ’. ‘ಸಾವಿನ ಸೂಚಿ’ ಎಂಬ ಅಡಿಬರಹ ಹೊಂದಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಅಶೋಕ ಚಕ್ರವರ್ತಿ. ಇದು ಅವರ ನಿರ್ದೇಶನದ ಚೊಚ್ಚಲ ಸಿನಿಮಾ. ‘ಸಕೂಚಿ’ ಎಂದರೆ ಘೋರವಾದ ವಾಮಾಚಾರ. ‘ಬ್ಲ್ಯಾಕ್ ಮ್ಯಾಜಿಕ್ ಕಥೆಯನ್ನು ತೆಗೆದುಕೊಂಡು ಕಮರ್ಷಿಯಲ್ ಸಿನಿಮಾ ಮಾಡಿದ್ದೇನೆ. ಇದರಲ್ಲಿ ನಾಯಕ ಹೇಗೆ ಸಕೂಚಿಗೆ ಒಳಗಾಗುತ್ತಾನೆ ಎಂಬುವುದು ಮುಖ್ಯವಾದ ಅಂಶ’ ಎಂದಿದ್ದಾರೆ ಅಶೋಕ. ‘ರಂಗನಾಯಕಿ’ ಚಿತ್ರದಲ್ಲಿ ನಟಿಸಿದ್ದ ತ್ರಿವಿಕ್ರಮ ಸಾಮ್ರಾಟ್ ನಾಯಕನಾಗಿ ಇಲ್ಲಿ ಬಣ್ಣ ಹಚ್ಚಿದ್ದಾರೆ. 30-40 ಮಂಗಳಮುಖಿಯರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.