ಸಿನಿಮಾ ನಿರ್ಮಾಣ ಮಾಡುವಷ್ಟೆ ಕಷ್ಟ ಅದನ್ನು ಬಿಡುಗಡೆ ಮಾಡಿ, ಜನರಿಗೆ ತಲುಪಿಸುವುದು. ಹಲವು ಚಿತ್ರತಂಡಗಳು ಸಿನಿಮಾ ನಿರ್ಮಾಣ ಮಾಡಿದ್ದರೂ, ಬಿಡುಗಡೆಯಾಗದೇ ಸಂಕಷ್ಟ ಎದುರಿಸಿವೆ. ಅದೇ ರೀತಿ ‘ಮೂರು ಕಾಸಿನ ಕುದುರೆ’ ಸಿದ್ಧಗೊಂಡು ಎರಡು ವರ್ಷಗಳಾದರೂ ವಿತರಕರು ಸಿಗದೇ ಬಿಡುಗಡೆ ಭಾಗ್ಯ ಕಂಡಿರಲಿಲ್ಲ.

ಆದರೆ, ಅಮೆಜಾನ್ ಪ್ರೈಂ ಈ ಚಿತ್ರದ ಕಟೆಂಟ್ ಇಷ್ಟಪಟ್ಟು ತಂಡದ ಜತೆ ಕೈಜೋಡಿಸಿದ್ದಾರೆ. ಕಳೆದ ವಾರವಷ್ಟೇ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ‘ಮೂರು ಕಾಸಿನ ಕುದುರೆ’ ಚಿತ್ರಕ್ಕೆ ಹಲವು ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಮಾಹಿತಿ ಹಂಚಿಕೊಳ್ಳಲು ಇಡೀ ಚಿತ್ರ ತಂಡ ಸುದ್ದಿಗೋಷ್ಠಿ ಕರೆದಿತ್ತು.

ಇದೊಂದು ಸೋಷಿಯಲ್ ಡ್ರಾಮಾ ಆಗಿದ್ದು, ಚಿತ್ರದ 3 ಪ್ರಮುಖ ಪಾತ್ರಗಳಲ್ಲಿ ಪೂರ್ಣಚಂದ್ರ ಮೈಸೂರು, ಸನಾತನಿ ಹಾಗೂ ಗೋವಿಂದೇಗೌಡ ಕಾಣಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಗಿರೀಶ್ ಎಸ್.ಗೌಡ್ರು ಬರೆದಿದ್ದು, ಪ್ರದೀಪ್ ಗಾಂಧಿ ಅವರ ಛಾಯಾಗ್ರಹಣ, ಆನಂದರಾಜಾ ವಿಕ್ರಮ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ನಿರ್ಮಾಪಕ, ನಿರ್ದೇಶಕ ಗಿರೀಶ್ ಮಾತನಾಡಿ, ‘ ನಾನು ರಂಗಭೂಮಿಯ ಹಿನ್ನೆಲೆಯಿಂದ ಬಂದವನು. ಹಲವು ಧಾರಾವಾಹಿ ಮತ್ತು ಸಿನಿಮಾಗಳಿಗೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಇದೊಂದು ಅಪಹರಣ ಕಥಾಹಂದರವಿದ್ದು, ಮೂರು ಜನರ ಸುತ್ತ ನಡೆಯುವ ಕಥೆ. ಮಧ್ಯಮ ವರ್ಗದಿಂದ ಬಂದ ಯುವಕರು ತಮ್ಮ ಕನಸನ್ನು ಈಡೇರಿಸಿ ಕೊಳ್ಳಲು ಏನು ಮಾಡುತ್ತಾರೆ ಎಂಬುದೇ ಕಥೆ. ಮೂರು ಭಾಗಗಳಲ್ಲಿ ಈ ಕಥೆ ನಡೆಯುತ್ತದೆ ಎಂದು ಹೇಳಿದರು.

ನಾಯಕ ಪೂರ್ಣಚಂದ್ರ ಮಾತನಾಡಿ, ‘ ಕಲಾವಿದನಾಗಬೇಕೆಂದು ಹೊರಟ ನನ್ನ ಪಾತ್ರ ದುಡ್ಡನ್ನು ಹೊಂದಿಸಲು ಹೇಗೆಲ್ಲ ಕಷ್ಟಪಡುತ್ತದೆ’ ಎಂಬುದನ್ನು ತಿಳಿಸಲಾಗಿದೆ. ನಾಯಕಿ ಸನಾತನಿ ಮಾತನಾಡಿ, ‘ ಹಿಂದೆ ಹೋಮ್ಲಿ ಪಾತ್ರಗಳನ್ನೇ ಮಾಡಿದ್ದ ನಾನು ಇದರಲ್ಲಿ ಮಾಡ್ರನ್ ಆಗಿ ಕಾಣಿಸಿಕೊಂಡಿದ್ದೇನೆ ಎಂದರು.

ಗೋವಿಂದೇಗೌಡ (ಜೀಜಿ)ಮಾತನಾಡಿ ಕ್ಯಾಬ್ ಡ್ರೈವರ್ ಸಿನಿಮಾದುದ್ದಕ್ಕೂ ನನ್ನ ಪಾತ್ರವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.