ಬೆಂಗಳೂರು: ‘ಕನ್ನಡ ಸಂಘಟನೆಗಳ ಒಕ್ಕೂಟ ಶುಕ್ರವಾರ(ಸೆ.29)ದಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಈ ವಿಷಯವಾಗಿ ಚರ್ಚಿಸಲು ಚಿತ್ರರಂಗದ ವಿವಿಧ ಸಂಘಗಳ ಜೊತೆ ಬುಧವಾರ(ಸೆ.27) ಸಭೆ ಆಯೋಜಿಸಲಾಗಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ(ಕೆಎಫ್‌ಸಿಸಿ) ಅಧ್ಯಕ್ಷ ಎನ್.ಎಂ.ಸುರೇಶ್ ತಿಳಿಸಿದರು.

’ಸಭೆಯಲ್ಲಿ ಬಂದ್‌ಗೆ ಯಾವ ರೂಪದಲ್ಲಿ ಬೆಂಬಲ ನೀಡಬೇಕು ಎನ್ನುವುದರ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಅವರು ಹೇಳಿದರು.

ಮನವರಿಕೆ ಮಾಡಿಕೊಡಿ: ‘ಕನ್ನಡದ ನೆಲ, ಜಲ, ಭಾಷೆಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಕಾವೇರಿ ನದಿ ನೀರು ಹಂಚಿಕೆಯಲ್ಲಾಗಿರುವ ವ್ಯತ್ಯಾಸದಿಂದ ಕೃಷಿ ಮಾತ್ರವಲ್ಲದೆ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಬರ ಅಧ್ಯಯನ ಸಮಿತಿ- ಕಾವೇರಿ ಸಮಿತಿಯ ತಜ್ಞರು ಕರ್ನಾಟಕದ ಬರ ಪರಿಸ್ಥಿತಿ ಯನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರಕ್ಕೆ ತುರ್ತಾಗಿ ಮನವರಿಕೆ ಮಾಡಿಕೊಡಬೇಕಿದೆ’ ಎಂದು ನಟ ಸುದೀಪ್ ಆಗ್ರಹಿಸಿದ್ದಾರೆ.

ನಮ್ಮ ನೆಲ ನಮ್ಮ ಜಲ ಮೊದಲು ನಮ್ಮ ಜನರಿಗೆ. ಮಳೆ ಅಭಾವದಿಂದ ರೈತರ ಕೃಷಿಗೆ ಮತ್ತು ಕುಡಿಯುವ ನೀರಿಗೆ ಸಹ ಸಮಸ್ಯೆ ಉಂಟಾಗುತ್ತಿದೆ . ಕಾವೇರಿ ನಮ್ಮ ಮೂಲ ಸಂಪನ್ಮೂಲ ಆದಕಾರಣ ಸರ್ಕಾರವು ಎಲ್ಲಾ ವಿಷಯವನ್ನು ಗಮನಿಸಿ ನಮ್ಮ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಅರ್ಥಮಾಡಿಸಲಿ.

–ಗಣೇಶ್ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.