ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಭರ್ಜರಿ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ದೇಶ ವಿದೇಶದಲ್ಲೂ ಈ ಸಿನಿಮಾ ಸದ್ದು ಮಾಡುತ್ತಿದೆ.

ಅದರೆ,ಆರ್ಆರ್ಆರ್ ಇಷ್ಟು ಅಬ್ಬರಿಸಿದರೂ ಕನ್ನಡದ ಕೆಜಿಎಫ್ ಚಾಪ್ಟರ್ 2 ಮುಂದೆ ಒಂದು ವಿಷಯದಲ್ಲಿ ತುಂಬಾ ಹಿಂದೆ ಬಿದ್ದಿದೆ. ಕನ್ನಡದ ಚಿತ್ರವೊಂದು ₹500 ಕೋಟಿ ಬಜೆಟ್ನಿಂದ ನಿರ್ಮಾಣವಾಗಿರುವ ಹಾಗೂ ಖ್ಯಾತ ನಿರ್ದೇಶಕ ರಾಜಮೌಳಿ ಚಿತ್ರಕ್ಕೆ ಬಹು ದೊಡ್ಡ ಟಕ್ಕರ್ ಕೊಟ್ಟಿದೆ.

ಹೌದು, ಆರ್ಆರ್ಆರ್ ಸಿನಿಮಾದ ಟ್ರೈಲರ್ ಹಾಗೂಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಯುಟ್ಯೂಬ್ ವೀಕ್ಷಣೆ ಪ್ರಮಾಣ ಗಮನಿಸಿದರೆಕೆಜಿಎಫ್ ಮುಂದೆಆರ್ಆರ್ಆರ್ ಸಪ್ಪೆ ಎನಿಸಿದೆ. ಟ್ರೈಲರ್ ಬಿಡುಗಡೆಯಾಗಿ ಒಂದು ತಿಂಗಳಾದರೂಆರ್ಆರ್ಆರ್ ಐದೂ ಭಾಷೆಯ ಟ್ರೈಲರ್ ಯುಟ್ಯೂಬ್ ವೀಕ್ಷಣೆ 109 (10.9 ಕೋಟಿ) ಮಿಲಿಯನ್ ವೀಕ್ಷಣೆ ಕಂಡಿದೆ.

ದಿ ಕಾಶ್ಮೀರ್ ಫೈಲ್ಸ್: ಬ್ರಿಟನ್ ಸಂಸತ್ನಿಂದ ವಿವೇಕ್ ಅಗ್ನಿಹೋತ್ರಿಗೆ ಆಹ್ವಾನ

ಆದರೆ, ಕೆಜಿಎಫ್ ಚಾಪ್ಟರ್ 2 ಐದೂ ಭಾಷೆಯ ಟ್ರೈಲರ್ ಬಿಡುಗಡೆಯಾಗಿ ಕೇವಲ ಮೂರೇ ದಿನದಲ್ಲಿ 135 ಮಿಲಿಯನ್ (13.5 ಕೋಟಿ) ಯುಟ್ಯೂಬ್ ವೀಕ್ಷಣೆ ಕಂಡಿದೆ. ಈ ಚಿತ್ರದ ಟ್ರೈಲರ್ ಕಳೆದ ಮಾರ್ಚ್ 27 ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

ಕನ್ನಡದ ಚಿತ್ರವೊಂದರ ಟ್ರೈಲರ್ ಈ ಪ್ರಮಾಣದಲ್ಲಿ ಯುಟ್ಯೂಬ್ ವೀಕ್ಷಣೆ ಕಂಡಿರುವುದು ತೆಲುಗು, ತಮಿಳು, ಹಾಗೂ ಹಿಂದಿ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ.

ರಾಜಮೌಳಿ ನಿರ್ದೇಶನದಆರ್ಆರ್ಆರ್ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್, ರಾಮ್ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14 ರಂದು ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ತಾರಾಗಣದಲ್ಲಿದ್ದಾರೆ. ಸಂಜಯ್ ದತ್, ರವಿನಾ ಟಂಡನ್ ಇನ್ನೂ ಅನೇಕರ ಪಾತ್ರಗಳು ಗಮನ ಸೆಳೆದಿವೆ.

ತನ್ನದೇ ಫೋಟೊಗಳನ್ನು ಬಳಸಿ ತಯಾರಿಸಿದ ಉಡುಗೆ ತೊಟ್ಟ ಉರ್ಫಿ ಜಾವೇದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.