‘ಲವ್ 360’ ಬಳಿಕ ನಿರ್ದೇಶಕ ಶಶಾಂಕ್ ಆ್ಯಕ್ಷನ್ ಕಟ್ ಹೇಳಿರುವ ಹೊಸ ಸಿನಿಮಾ ‘ಕೌಸಲ್ಯಾ ಸುಪ್ರಜಾ ರಾಮ’ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾ ಇದೇ ಜುಲೈ 28ಕ್ಕೆ ರಿಲೀಸ್ ಆಗಲಿದ್ದು, ಚಿತ್ರದ ಟ್ರೈಲರ್ ಅನ್ನು ನಟ ಸುದೀಪ್ ಇತ್ತೀಚೆಗೆ ಬಿಡುಗಡೆಗೊಳಿಸಿದರು.

ಟ್ರೈಲರ್ ಮೂಲಕ ಡಾರ್ಲಿಂಗ್ ಕೃಷ್ಣ ಹಾಗೂ ಬೃಂದಾ ಆಚಾರ್ಯ ಅವರ ‘ರಾಮ್–ಶಿವಾನಿ’ ಜೋಡಿ ಮೋಡಿ ಮಾಡಿದೆ. ಹೊಸ ಬಗೆಯ ಪ್ರೇಮಕಥೆ, ಭಾವನೆಗಳ ಮೂಟೆಯೊಂದಿಗೆ ಈ ಬಾರಿ ಶಶಾಂಕ್ ಪ್ರೇಕ್ಷಕರೆದುರಿಗೆ ಬಂದಿದ್ದಾರೆ. ತಾಯಿ ಮಗನ ಭಾವನಾತ್ಮಕ ಸನ್ನಿವೇಶಗಳನ್ನೊಳಗೊಂಡಿರುವ ಚಿತ್ರ ಇದಾಗಿದ್ದು, ನಾಯಕನ ತಾಯಿ - ತಂದೆ ಪಾತ್ರದಲ್ಲಿ ಸುಧಾ ಬೆಳವಾಡಿ, ರಂಗಾಯಣ ರಘು ನಟಿಸಿದ್ದಾರೆ. ಸಿನಿಮಾದಲ್ಲಿ ಮತ್ತೋರ್ವ ನಾಯಕಿಯಾಗಿ ಮಿಲನಾ ನಾಗರಾಜ್ ಬಣ್ಣಹಚ್ಚಿದ್ದಾರೆ.

‘ಚಿತ್ರದ ಕಥೆಯ ಕಾರಣದಿಂದ ನಾನು ಇದುವರೆಗೂ ಮಾಡಿರುವ ಸಿನಿಮಾಗಳಲ್ಲಿ ಅತ್ಯುತ್ತಮ ಸಿನಿಮಾ ಇದಾಗಿದೆ. ಈ ಕಥೆಗೆ ಯಾವುದೋ ಒಂದು ಆಯಾಮವಿಲ್ಲ, ಹಲವು ಆಯಾಮಗಳಿವೆ. ಕೃಷ್ಣ ಅವರನ್ನು ಬೇರೆ ರೀತಿಯೇ ತೋರಿಸುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ ಶಶಾಂಕ್. ‘ಇದು ಶಶಾಂಕ್ ಸ್ಟೈಲ್ ಸಿನಿಮಾ’ ಎಂದ ಡಾರ್ಲಿಂಗ್ ಕೃಷ್ಣ, ‘ಶಶಾಂಕ್ ಅವರು ನನ್ನ ಬಳಿ ಬಂದಾಗ, ಕಥೆ ಇರಲಿಲ್ಲ. ನಿಮಗೆ ಯಾವ ತರಹದ ಸಿನಿಮಾ ಬೇಕು ಎಂದು ಕೇಳಿದರು. ನೀವು ನಿಮ್ಮ ಸ್ಟೈಲ್ನಲ್ಲೇ ಮಾಡಿ ಎಂದು ಹೇಳಿದ್ದೆ. ಒಂದು ತಿಂಗಳ ನಂತರ ಈ ಕಥೆ ತಂದರು. ಬಹಳ ಸುಲಭವಾಗಿ ಮುಗಿದ ಚಿತ್ರ ಇದು. ಈ ಸಿನಿಮಾ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ’ ಎಂದರು.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು. ಶಶಾಂಕ್ ಸಿನಿಮಾಸ್ ಹಾಗೂ ಬಿ.ಸಿ.ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹೌಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.