‘ಲೂಸ್ ಮಾದ’ ಎಂದೇ ಕರೆಸಿಕೊಳ್ಳುವ ಕನ್ನಡದ ಖ್ಯಾತ ನಟ ಯೋಗಿಗೆ ಕಳೆದ ವರ್ಷ ಸುಖ–ದುಃಖಗಳ ಸಮಾನ ವರ್ಷವಾಗಿತ್ತಂತೆ. ಪುಟ್ಟ ಮಗಳು ಶ್ರೀನಿಕಾ ಜೊತೆ ಸಂತಸದಿಂದ ಕಾಲ ಕಳೆದಿದ್ದರು ಯೋಗಿ. ಅದರೊಂದಿಗೆ ಕೆಲವು ಅಹಿತಕರ ಘಟನೆಗಳು ಅವರ ಜೀವನದಲ್ಲಿ ನಡೆದಿತ್ತು. ಅದರಲ್ಲೂ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಯೋಗಿ ಅವರನ್ನು ವಿಚಾರಣೆಗೂ ಕರೆದಿದ್ದರು. ‘ನನ್ನನ್ನು ವಿಚಾರಣೆಗೆ ಕರೆದಿರುವುದೇ ದೊಡ್ಡ ವಿಷಯವಾಗಿತ್ತು. ಆದರೆ ನಾನು ಹಿಂದಿನ ಘಟನೆಗಳನ್ನು ಮರಳಿ ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಈ ವರ್ಷವನ್ನು ಸಕಾರಾತ್ಮಕ ಮನೋಭಾವದೊಂದಿಗೆ ಆರಂಭಿಸಲು ಯೋಚಿಸಿದ್ದೇನೆ. ಒಬ್ಬ ತಂದೆಯಾಗಿ ಲಾಕ್‌ಡೌನ್ ದಿನಗಳನ್ನು ತುಂಬಾನೇ ಎಂಜಾಯ್ ಮಾಡಿದ್ದೇನೆ. ಶ್ರೀನಿಕಾ ಈಗ ತೊದಲು ಮಾತನಾಡಲು ಆರಂಭಿಸಿದ್ದಾಳೆ. ಅದನ್ನು ಕೇಳಲು ಖುಷಿ ಎನ್ನಿಸುತ್ತದೆ. ಅವಳು ಹುಟ್ಟಿದ ಬಳಿಕ ನನ್ನ ಜೀವನವೇ ಬದಲಾಗಿದೆ. ಅವಳು ನನ್ನ ಬದುಕಿಗೆ ಹೊಸ ಅರ್ಥ ತಂದಿದ್ದಾಳೆ’ ಎಂದು ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ವೈಯಕ್ತಿಕ ಜೀವನವನ್ನು ಹೊರತುಪಡಿಸಿ ಹೋಂ ಪ್ರೊಡಕ್ಷನ್‌ನಲ್ಲಿ ‘ಕಂಸ’ ಎಂಬ ಚಿತ್ರ ಮಾಡುತ್ತಿದ್ದಾರೆ ಯೋಗಿ. ರಂಜಿತ್ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ತಮಿಳು ನಿರ್ದೇಶಕ, ನಟ ಸಮುತಿರಕಣಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

ತಮ್ಮ ಹೊಸ ಪ್ರೊಡಕ್ಷನ್ ಹೌಸ್ ಬಗ್ಗೆ ಮಾತನಾಡಿರುವ ಯೋಗಿ ‘ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ದಶಕಗಳಿಂದ ಇದ್ದೇನೆ. ನನ್ನದೇ ಏನಾದರೂ ಸ್ವಂತ ಮಾಡಬೇಕು ಎನ್ನುವ ಯೋಚನೆ ಮೊದಲಿನಿಂದಲೂ ಇತ್ತು. ಕಂಸ ಭೂಗತಲೋಕಕ್ಕೆ ಸಂಬಂಧಿಸಿದ ಸಿನಿಮಾ. ಇದರಲ್ಲಿ ನಾನು ಮೂರು ಭಿನ್ನ ಛಾಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮಾರ್ಚ್‌ನಿಂದ ಚಿತ್ರದ ಶೂಟಿಂಗ್ ಆರಂಭ ಮಾಡಲು ಯೋಚಿಸಿದ್ದು ಮೈಸೂರು, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ’ ಎಂದಿದ್ದಾರೆ.

ಯೋಗಿ ‘ನಾನು ಅದು ಮತ್ತು ಸುಜಾತ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಪ್ರೀತಮ್ ನಿರ್ದೇಶನವಿದೆ. ‘ಇದು ಚಿತ್ರವು ಭಿನ್ನ ಹಾಸ್ಯ ಕಥಾಹಂದರವನ್ನು ಹೊಂದಿದ್ದು, ನಾನು ಭಿನ್ನವಾಗಿಯೇ ಕಾಣಿಸಲಿದ್ದೇನೆ. ಇದರೊಂದಿಗೆ ನಾನು ವಿನೋದ್ ಪ್ರಭಾಕರ್ ನಟನೆಯ ಲಂಕಾಸುರ ಸಿನಿಮಾದಲ್ಲೂ ನಟಿಸುತ್ತಿದ್ದೇನೆ. ಇದರಲ್ಲಿ ಖಳನಟನ ಪಾತ್ರ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.