ನಟಿ ಮೀರಾ ಚೋಪ್ರಾ ಫ್ರಂಟ್ಲೈನ್ ವರ್ಕರ್ ಎಂದು ಸುಳ್ಳು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಆರೋಪಿಸಿದೆ. ನಾನು ಸುಳ್ಳು ಹೇಳಿ ಲಸಿಕೆ ಪಡೆದಿಲ್ಲ ಎಂದು ಮೀರಾ ಚೋಪ್ರಾ ಸ್ಪಷ್ಟನೆ ನೀಡಿದ್ದಾರೆ.

18-45 ವರ್ಷ ವಯೋಮಿತಿಯವರಿಗೆ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಅವಕಾಶ ನೀಡಿತ್ತು. ಅನೇಕರು ಆನ್ಲೈನ್ನಲ್ಲಿನೋಂದಣಿ ಮಾಡಿಕೊಂಡು, ತಮ್ಮ ಸರದಿ ಬಂದಾಗ ಲಸಿಕೆ ಪಡೆದಿದ್ದಾರೆ.

ಲಸಿಕೆ ಪಡೆದ ಫೋಟೊವನ್ನು ಮೀರಾ ಚೋಪ್ರಾ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಶೇರ್ ಮಾಡಿ, ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಠಾಣೆಯ ಬಿಜೆಪಿ ಘಟಕದ ಅಧ್ಯಕ್ಷ ನಿರಂಜನ್ ಅವರು ಮೀರಾ ಚೋಪ್ರಾ ಅವರ ಐಡಿ ಕಾರ್ಡ್ ಫೋಟೊವನ್ನು ಹಂಚಿಕೊಂಡು, ಫ್ರಂಟ್ಲೈನ್ ವರ್ಕರ್ ಎಂದು ಸುಳ್ಳು ಹೇಳಿ ಮೀರಾ ಲಸಿಕೆ ಪಡೆದಿದ್ದಾರೆ ಎಂದು ಆರೋಪಿಸಿ ಟ್ವಿಟ್ ಮಾಡಿದ್ದರು.

ನಿರಂಜನ್ ಪೋಸ್ಟ್ ಮಾಡಿದ ಐಡಿ ಕಾರ್ಡ್ನಲ್ಲಿ ಮೀರಾ ಅವರ ಪೋಟೊ ಇದ್ದು ‘ಓಂ ಸಾಯಿ ಆರೋಗ್ಯ ಕೇಂದ್ರ’ದ ಸೂಪರ್ವೈಸರ್ ಎಂದು ಬರೆಯಲಾಗಿತ್ತು. ಈ ಐಡಿ ಕಾರ್ಡ್ ಇಟ್ಟುಕೊಂಡು ಮೀರಾ ಲಸಿಕೆ ಪಡೆದಿದ್ದಾರೆ ಎಂಬುದು ಬಿಜೆಪಿಯ ಆರೋಪವಾಗಿದೆ.

ಈ ಆರೋಪವನ್ನು ಮೀರಾ ಅಲ್ಲಗಳೆದಿದ್ದಾರೆ. ನಾನು ನೋಂದಣಿ ಮಾಡಿಕೊಂಡು, ನನ್ನ ಸರದಿ ಬಂದಾಗ ಆಧಾರ್ ಕಾರ್ಡ್ ನೀಡಿ ಲಸಿಕೆ ಪಡೆದಿದ್ದೇನೆ. ಬಿಜೆಪಿಯವರು ಟ್ವೀಟ್ ಮಾಡಿರುವ ಐಡಿ ಕಾರ್ಡ್ ನಕಲಿ ಎಂದು ಮೀರಾ ಹೇಳಿದ್ದಾರೆ.

ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಠಾಣೆಯ ಆರೋಗ್ಯದಿಕಾರಿ ಸ್ಥಳೀಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೀರಾ ಚೋಪ್ರಾ ಕನ್ನಡ ಸೇರಿದಂತೆ ತೆಲುಗು, ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದರ್ಶನ್ ಅಭಿನಯದ ‘ಅರ್ಜುನ್’ ಸಿನಿಮಾದಲ್ಲಿ ಮೀರಾ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.