ಹೈದರಾಬಾದ್: ತೆಲುಗಿನ ಜನಪ್ರಿಯ ನಟ ಮಹೇಶ್ ಬಾಬು ಅವರ ತಂದೆ, ಸೂಪರ್ ಸ್ಟಾರ್ ಖ್ಯಾತಿಯ ನಟ ಕೃಷ್ಣ ಮಂಗಳವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಕುರಿತು ಘಟ್ಟಮನೇನಿ ಕುಟುಂಬ ಹೇಳಿಕೆ ಬಿಡುಗಡೆ ಮಾಡಿದೆ.

‘ನಮ್ಮ ಪ್ರೀತಿಯ ಕೃಷ್ಣ ಅವರ ಅಗಲಿಕೆಯ ಬಗ್ಗೆ ನಾವು ನಿಮಗೆ ಅತ್ಯಂತ ದುಃಖದಿಂದ ತಿಳಿಸುತ್ತೇವೆ. ಚಿತ್ರರಂಗದ ಸೂಪರ್ಸ್ಟಾರ್ ಆಗಿದ್ದ ಅವರು ಪ್ರೀತಿ, ವಿನಮ್ರತೆ ಮತ್ತು ಸಹಾನುಭೂತಿಯಿಂದ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡಿದ್ದರು. ಅವರು ನಿಧನರಾದರೂ ಅವರ ಕೆಲಸದ ಮೂಲಕ ನಮ್ಮ ನಡುವೆಯೇ ಇರುತ್ತಾರೆ. ಇನ್ಮುಂದೆ ನಾವು ಅವರನ್ನು ಪ್ರತಿ ದಿನವೂ ಮಿಸ್ ಮಾಡಿಕೊಳ್ಳುತ್ತೇವೆ. ಕೃಷ್ಣ ಅವರ ಹೇಳಿದಂತೆ ವಿದಾಯಗಳು ಶಾಶ್ವತವಲ್ಲ. ಮತ್ತೆ ಭೇಟಿಯಾಗುವವರೆಗೆ’ ಎಂದು ಘಟ್ಟಮನೇನಿ ಕುಟುಂಬ (ಮಹೇಶ್ ಬಾಬು ಕುಟುಂಬ) ಟ್ವೀಟ್ ಮಾಡಿದೆ.

ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದರಿಂದ ಅವರನ್ನು ಭಾನುವಾರ ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮಂಗಳವಾರ ಬೆಳಗಿನ ಜಾವ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಮಹೇಶ್ ಬಾಬು ತಾಯಿ ಇಂದಿರಾ ಅವರು ಕಳೆದ ಸೆಪ್ಟೆಂಬರ್ನಲ್ಲಿ ನಿಧನರಾಗಿದ್ದರು. ಮಹೇಶ್ ಸಹೋದರ ರಮೇಶ್ ಬಾಬು ಕಳೆದ ಜನವರಿಯಲ್ಲಿ ಮೃತಪಟ್ಟಿದ್ದರು. ಒಂದೇ ವರ್ಷದಲ್ಲಿ ಮಹೇಶ್ ಬಾಬು ಅವರ ಕುಟುಂಬಕ್ಕೆ ಎದುರಾದ ಅಘಾತದ ಬಗ್ಗೆ ಅಭಿಮಾನಿಗಳು ಸಂಕಟ ವ್ಯಕ್ತಪಡಿಸಿದ್ದಾರೆ.

ಕೃಷ್ಣ ಅವರು 350ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿ, ಸೂಪರ್ ಸ್ಟಾರ್ ಎಂದೇ ಜನಪ್ರಿಯತೆ ಗಳಿಸಿದ್ದರು. ಕೃಷ್ಣ ನಿಧನಕ್ಕೆ ಚಿತ್ರರಂಗದ ದಿಗ್ಗಜರು ಸೇರಿದಂತೆ ಅನೇಕ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಸಿನಿಮಾದಿಂದ ದೂರವಿದ್ದು, ಕುಟುಂಬದ ಜತೆ ಇರಲು ಬಯಸಿದ್ದೇನೆ: ಅಮೀರ್ ಖಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.