ಮುಂಬೈ: ‘ಅಮ್ಮ ನಿನ್ನ ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತೇನೆ'ಎಂದು ದಿವಂಗತ ನಟಿಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.

ಶ್ರೀದೇವಿ ಅವರ 2ನೇ ಪುಣ್ಯತಿಥಿ ದಿನವಾದ ಇಂದುಜಾಹ್ನವಿ ಕಪೂರ್ ಅವರು, ಶ್ರೀದೇವಿ ಜೊತೆಗಿರುವ ಒಂದು ಫೋಟೊವನ್ನು ಹಂಚಿಕೊಂಡು ‘ಅಮ್ಮ ನಿನ್ನ ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತಿರುವೆ‘ ಎಂದುಬರೆದುಕೊಂಡಿದ್ದಾರೆ. ಮನಕರಗುವ ಈ ಪೋಸ್ಟ್ ಅನ್ನು 5 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದು 5 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಹಾಕಿದ್ದಾರೆ.

2018ರಲ್ಲಿ ಶ್ರೀದೇವಿ ದುಬೈನಲ್ಲಿಹೃದಯಾಘಾತದಿಂದ ನಿಧನರಾಗಿದ್ದರು. ಆಗ ಅವರಿಗೆ 54 ವರ್ಷ ವಯಸ್ಸಾಗಿತ್ತು. ಶ್ರೀದೇವಿಗೆ ಜಾಹ್ನವಿ ಮತ್ತು ಖುಷಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ಜಾಹ್ನವಿ ಕಪೂರ್ ಬಾಲಿವುಡ್ನ ‘ದಡಕ್‘ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಚಿತ್ರದಲ್ಲಿಯೇ ಉತ್ತಮ ನಟನೆಗಾಗಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

ನೆಟ್ಫ್ಲಿಕ್ಸ್ನ ‘ಗೋಸ್ಟ್ ಸ್ಟೋರಿಸ್‘ನಲ್ಲೂ ಅಭಿನಯಿಸಿದ್ದಾರೆ. ಇದೀಗ ಜಾಹ್ನವಿ, ಗುಂಜಾನ್ ಸಕ್ಸೆನಾ,ರೂಹಿಆಫ್ಜಾ ಹಾಗೂ ದೋಸ್ತಾನ2 ಸೇರಿದಂತೆ ನಾಲ್ಕಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

5 ದಶಕಗಳ ಕಾಲ ತೆಲುಗು, ತಮಿಳುಸೇರಿದಂತೆ ಬಾಲಿವುಡ್ನ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಶ್ರೀದೇವಿ ಅಭಿನಯಿಸಿದ್ದಾರೆ. ಬಾಲಿವುಡ್ನ‘ಮಾಮ್‘ ಶ್ರೀದೇವಿ ನಟಿಸಿದ ಕೊನೆಯ ಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.