ಮುಂಬೈ: ಬಾಲಿವುಡ್ ಬಿಗ್ ಬಿ ಖ್ಯಾತಿಯ ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಪುತ್ರಿ ಶ್ವೇತಾ ನಂದಾ ಅವರಿಗೆ ಐಷಾರಾಮಿ ಬಂಗಲೆಯನ್ನು (ಪ್ರತೀಕ್ಷಾ) ಉಡುಗೊರೆಯಾಗಿ ನೀಡಿದ್ದಾರೆ.

ಇಲ್ಲಿನ ಜುಹು ಪ್ರದೇಶದಲ್ಲಿರುವ ‘ಪ್ರತೀಕ್ಷಾ‘ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಮೌಲ್ಯ ₹ 50 ಕೋಟಿ ಎಂದು ಅಂದಾಜಿಸಲಾಗಿದೆ. ₹ 50.65 ಲಕ್ಷ ಮುದ್ರಾಂಕ ಶುಲ್ಕ ಪಾವತಿಸಿ ಬಂಗಲೆಯನ್ನು ಮಗಳ ಹೆಸರಿಗೆ ನೋಂದಾಯಿಸಿದ್ದಾರೆ. ಈ ಪ್ರಕ್ರಿಯೆ ನವೆಂಬರ್ 8ರಂದು ನಡದಿದೆ ಎಂದು ಬಾಲಿವುಡ್ ಮೂಲಗಳು ಖಚಿತ ಪಡಿಸಿವೆ.

ಬಂಗಲೆ 890 ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿದೆ. ಅಮಿತಾಬ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಅನೇಕ ವರ್ಷಗಳ ಕಾಲ ತಮ್ಮ ಹೆತ್ತವರೊಂದಿಗೆ ಈ ಬಂಗಲೆಯಲ್ಲಿ ವಾಸಿಸುತ್ತಿದ್ದರು.

ಅಮಿತಾಬ್ ಪ್ರಸ್ತುತ ಜಲ್ಸಾ ಬಂಗೆಯಲ್ಲಿ ವಾಸಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.