‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಕ್ಕಿ ಕೌಶಲ್ ಈಗ ಹೊಸ ಪ್ರಯೋಗಗಳಿಗೆ ಸಜ್ಜಾಗಿದ್ದಾರೆ.

ನೋರಾ ಫತೇಹಿ ಅವರೊಂದಿಗೆ ‘ಪಚ್‌ತಾವೋಗೆ’ ಮ್ಯೂಸಿಕ್ ವಿಡಿಯೊದಲ್ಲಿ ನಟಿಸಿದ್ದಾರೆ. ಭೂಷಣ್ ಕುಮಾರ್ ಈ ವಿಡಿಯೊ ನಿರ್ಮಾಣ ಮಾಡಿದ್ದಾರೆ. ಅರವಿಂದ್ ಖಿರಾ ನಿರ್ದೇಶನ ಇದಕ್ಕಿದೆ. ವಿಕ್ಕಿ ಹಾಗೂ ನೋರಾ ಇತ್ತೀಚೆಗೆ ಶಿಮ್ಲಾದಲ್ಲಿ ಓಡಾಡುತ್ತಿರುವ ಚಿತ್ರಗಳು ವೈರಲ್ ಆಗಿದ್ದವು. ಈ ಜೋಡಿ ಡೇಂಟಿಂಗ್‌ನಲ್ಲಿದೆ ಎಂಬ ಗುಸು ಗುಸು ಶುರುವಾಗಿತ್ತು. ಆದರೆ ಅವರು ವಿಡಿಯೊದ ಮೊದಲ ಹಂತದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು.

ಭಾವನಾತ್ಮಕ ಸನ್ನಿವೇಶಗಳನ್ನು ಒಳಗೊಂಡ ಹಾಡು ಇದಾಗಿದೆ ಎಂದು ಚಿತ್ರತಂಡ ಹೇಳಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ವಿಡಿಯೊದ ಮೊದಲ ಪೋಸ್ಟರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಶ್ರದ್ಧಾ ಕಪೂರ್, ಜಾನ್ ಅಬ್ರಹಾಂ, ಹೃತಿಕ್ ರೋಷನ್ ಸೇರಿದಂತೆ ಬಾಲಿವುಡ್‌ನ ಬಹುತೇಕ ನಟ, ನಟಿಯರು ಈ ಮೊದಲೇ ಮ್ಯೂಸಿಕ್ ವಿಡಿಯೊಗಳಲ್ಲಿ ಕಾಣಿಸಿಕೊಂಡಿದ್ದರು. ಇದರ ಯಶಸ್ಸು ಸಿನಿಮಾದ ಮೇಲೂ ಪರಿಣಾಮ ಬೀರುತ್ತದೆ. ನಟ, ನಟಿಯರ ಇಮೇಜ್ ಹೆಚ್ಚಿಸುತ್ತದೆ ಎಂದು ಇತ್ತೀಚೆಗೆ ಶ್ರದ್ಧಾ ಕಪೂರ್ ಹೇಳಿದ್ದರು.

‘ಪಚ್‌ತಾವೋಗೆ’ ವಿಡಿಯೊಗೆ ಜಾನಿ ಅವರು ಕತೆ ಕಟ್ಟಿದ್ದಾರೆ. ಬಿ.ಪರಾಕ್ ಇದಕ್ಕೆ ಸಂಗೀತ ನಿರ್ದೇಶಿಸಿದ್ದಾರೆ. ವಿಕ್ಕಿ ಕೌಶಲ್ ಮೊದಲ ಬಾರಿ ಮ್ಯೂಸಿಕ್ ವಿಡಿಯೊದಲ್ಲಿ ನಟಿಸಿದ್ದಾರೆ. ‘ಶಿಮ್ಲಾದಲ್ಲಿ ಶೂಟಿಂಗ್ ಮಾಡುವಾಗ ನಾನು ಸಾಕಷ್ಟು ಹೊಸ ವಿಷಯಗಳನ್ನು ಕಲಿತುಕೊಂಡೆ. ಸಿನಿಮಾಕ್ಕಿಂತ ಇದು ಭಿನ್ನವಾದ ಅನುಭವ ನೀಡಿದೆ. ಮೊದಲ ಬಾರಿ ಹಾಡನ್ನು ಕೇಳಿದಾಗ ಪುಳಕಿತನಾಗಿದ್ದೆ. ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗಿದೆ’ ಎಂದು ವಿಕ್ಕಿ ಟ್ವೀಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.