ಬೆಂಗಳೂರು: ₹10 ಕೋಟಿ ಬೇಡಿಕೆ ಇಟ್ಟು ಲೀಗಲ್ ನೋಟಿಸ್ ಕಳುಹಿಸಿರುವ ನಟ ಧನುಷ್ ವಿರುದ್ಧ ನಟಿ ನಯನತಾರಾ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘ ಪತ್ರ ಬರೆದಿದ್ದಾರೆ.

ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿರುವ ‘Nayanthara: Beyond the Fairytale’ ಸಾಕ್ಷ್ಯಚಿತ್ರದಲ್ಲಿ 'ನಾನುಮ್ ರೌಡಿ ಧಾನ್' ಸಿನಿಮಾದ ಮೂರು ಸೆಕೆಂಡು ದೃಶ್ಯ ಬಳಸಿದ್ದಕ್ಕಾಗಿ ನಟ ಧನುಷ್ ನೋಟಿಸ್ ಕಳುಹಿಸಿರುವುದಕ್ಕೆ ನಯನತಾರಾ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.

2015ರ ನಾನುಮ್ ರೌಡಿ ಧಾನ್ ಚಿತ್ರದ ದೃಶ್ಯಗಳನ್ನು ಬಳಕೆ ಮಾಡಲು ಧನುಷ್ ಅವರಲ್ಲಿ ಅನುಮತಿ ಕೇಳಿದ್ದೆ. ಆದರೆ ಎಲ್ಲ ಪ್ರಯತ್ನಗಳು ವಿಫಲವಾದವು. ಧನುಷ್ ಅನುಮತಿ ನಿರಾಕರಿಸಿದ್ದರಿಂದ ಸಾಕ್ಷ್ಮಚಿತ್ರವನ್ನು ಮರು ಚಿತ್ರೀಕರಿಸಿರುವುದಾಗಿ ನಯನತಾರಾ ತಿಳಿಸಿದ್ದಾರೆ.

ಪ್ರೀತಿ ಹಾಗೂ ಮದುವೆ ಸೇರಿದಂತೆ ಜೀವನದ ಅಮೂಲ್ಯ ಕ್ಷಣಗಳ ಸಾಕ್ಷ್ಯಚಿತ್ರದಲ್ಲಿ ಬಳಸಲಾದ ದೃಶ್ಯಗಳನ್ನು ಜನರ ಫೋನ್ಗಳಿಂದ ಚಿತ್ರೀಕರಿಸಲಾಗಿದೆ ಎಂದು ನಯನತಾರಾ ಸ್ಪಷ್ಟನೆ ನೀಡಿದ್ದಾರೆ.

ಅಭಿಮಾನಿಗಳು ನೋಡಿದ ಧನುಷ್ ಬೇರೆ ಅಸಲಿ ಧನುಷ್ ಬೇರೆಯೇ ಆಗಿದೆ. ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿನಿಮಾದಲ್ಲಿ ಯಾವುದೇ ಹಿನ್ನೆಲೆಯಿಲ್ಲದೆ, ಒಂಟಿ ಮಹಿಳೆಯಾಗಿ ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ಅಭಿಮಾನಿಗಳ ಬೆಂಬಲದಿಂದ ಈ ಹಂತಕ್ಕೆ ತಲುಪಿರುವುದಾಗಿ ತಿಳಿಸಿದ್ದಾರೆ.

ಈ ಲೀಗಲ್ ನೋಟಿಸ್ಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ನಯನತಾರಾ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಧನುಷ್ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.
.ಲೇಡಿ ಸೂಪರ್ ಸ್ಟಾರ್ ನಯನತಾರಾ ಜೀವನಾಧರಿತ ಸಾಕ್ಷ್ಯಚಿತ್ರ ನ.18ರಂದು ಬಿಡುಗಡೆ.Ilaiyaraaja Biopic: ಸಂಗೀತ ಮಾಂತ್ರಿಕ ಇಳಯರಾಜ ಪಾತ್ರದಲ್ಲಿ ನಟ ಧನುಷ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.