ಅಜಯ್ ದೇವಗನ್ ಮತ್ತು ಕಾಜೋಲ್ ಅಭಿನಯದ ‘ತಾನಾಜಿ‘ ಚಿತ್ರತಂಡಕ್ಕೆ ಎನ್‌ಸಿಪಿ ಎಚ್ಚರಿಕೆ ನೀಡಿದೆ.

‘ಚಿತ್ರದ ನಿರ್ದೇಶಕರು ಮರಾಠ ಸಾಮ್ರಾಟ ಶಿವಾಜಿ ಮಹಾರಾಜರ ವ್ಯಕ್ತಿತ್ವವನ್ನು ತಮಗೆ ಇಚ್ಛೆ ಬಂದಂತೆ ತೋರಿಸಲು ಪ್ರಯತ್ನಿಸಿದ್ದಾರೆ. ಆ ಮೂಲಕ ಇತಿಹಾಸದ ವಾಸ್ತವಿಕ ದೋಷಗಳು ಚಿತ್ರದ ಟ್ರೈಲರ್‌ನಲ್ಲಿ ಎದ್ದು ಕಾಣುತ್ತಿವೆ,’ಎಂದು ಎನ್‌ಸಿಪಿ ಮುಖಂಡ ಜಿತೇಂದ್ರ ಆವ್ಹಾದ್ ಕಿಡಿಕಾರಿದ್ದಾರೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ‘ಚರಿತ್ರೆಯಘಟನೆಗಳನ್ನು ಚಿತ್ರದ ನಿರ್ದೇಶಕರು ತಮಗೆ ಬೇಕಾದಂತೆ ತಿರುಚಿದ್ದಾರೆ. ಶಿವಾಜಿ ಮಹಾರಾಜರ ಕತ್ತಿಯು ಮಹಿಳೆಯರ ಮುಖ ಪರದೆಯನ್ನು ರಕ್ಷಿಸಲು ಇದೆ ಎಂಬ ಸಂಭಾಷಣೆ ಇದೆ. ಈ ರೀತಿಯ ಸಂಭಾಷಣೆಗಳು ನಿರ್ದೇಶಕರ ಮನಸ್ಥತಿಯನ್ನು ಎತ್ತಿ ಹಿಡಿಯುತ್ತವೆ. ಯಾವುದೇ ಮಹಿಳೆ ಮುಖ ಪರದೆ ಹೊದ್ದು ಬದುಕುವುದು ಶಿವಾಜಿ ಮಹಾರಾಜರಿಗೆ ಇಷ್ಟವಿರಲಿಲ್ಲ. ತಮ್ಮ ತಾಯಿಯನ್ನು ಸತಿ ಸಹಗಮನದಿಂದ ಅವರು ದೂರವಿರಿಸಿದರು. ಮಹಿಳೆಯರಿಗೆ ಸಭೆಗಳಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು. ಶಿವಾಜಿ ಮಹಾರಾಜರು ಭಾರತ ಇತಿಹಾಸದ ಅತ್ಯಂತ ಪ್ರಗತಿಪರ ಸಾಮ್ರಾಟ,’ ಎಂದು ಎನ್‌ಸಿಪಿ ಮುಖಂಡ ಹೇಳಿದ್ದಾರೆ.

ಟ್ರೈಲರ್‌ನಲ್ಲಿ ವ್ಯಕ್ತಿಯೊಬ್ಬ ಶಿವಾಜಿ ಮಹಾರಾಜರನ್ನು ದೊಣ್ಣೆಯಿಂದ ಹೊಡೆಯುವ ದೃಶ್ಯಕ್ಕೆ ಜಿತೇಂದ್ರ ಆವ್ಹಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಿತ್ರತಂಡ ಸ್ಪಷ್ಟೀಕರಣ ನೀಡಲು ಒತ್ತಾಯಿಸಿದ್ದಾರೆ.

ತಾನಾಜಿ ಐತಿಹಾಸಿಕ ಚಿತ್ರವಾಗಿದ್ದು, ಅಜಯ್ ದೇವಗನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ನಾಯಕಿಯಾಗಿ ಕಾಜೋಲ್ ಮಿಂಚಲಿದ್ದಾರೆ. ನವೆಂಬರ್ 19 ರಂದು ತಾನಾಜಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.