ಬಹುತೇಕ ಹೊಸಬರಿಂದಲೇ ಕೂಡಿರುವ ‘ನಿಮ್ದೆ ಕಥೆ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಅಭಿಲಾಷ ಧಳಪತಿ ಮತ್ತು ರಾಷಿಕಾ ಶೆಟ್ಟಿ ಜೋಡಿಯಾಗಿ ನಟಿಸಿದ್ದಾರೆ. ಸಿ.ಎಸ್. ರಾಘವೇಂದ್ರ ಆ್ಯಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಶ್ರೀನಿವಾಸ ರೆಡ್ಡಿ ಮತ್ತು ಅರವಿಂದ್ ಯು.ಎಸ್ ಬಂಡವಾಳ ಹೂಡಿದ್ದಾರೆ.

‘ಇದೊಂದು ಹಾಸ್ಯಮಯ, ಭಾವನಾತ್ಮಕ ಹಾಗೂ ಸ್ವಲ್ಪ ಸಸ್ಪೆನ್ಸ್ ಹೊಂದಿರುವ ಚಿತ್ರ. ಬೆಂಗಳೂರು ಮತ್ತು ಮೈಸೂರು ಸುತ್ತ ಮುತ್ತ ಚಿತ್ರೀಕರಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸವು ಮುಕ್ತಾಯ ಹಂತದಲ್ಲಿ ಇದ್ದು, ಇದೇ ನವೆಂಬರ್ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಾಗಲು ಎಲ್ಲಾ ಸಿದ್ಧತೆ ನಡೆಯುತ್ತಿದೆ’ ಎಂದಿದ್ದಾರೆ ನಿರ್ದೇಶಕರು.

ಸಿಹಿ ಕಹಿ ಚಂದ್ರು, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಮನೋಹರ್ ಗೌಡ, ಕೆ ವಿ ಮಂಜಯ್ಯ, ಜ್ಯೋತಿ ಮರೂರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರವೀಣ್ ನಿಕೇತನ್ ಸಂಗೀತ ಸಂಯೋಜನೆ, ಪ್ರಶಾಂತ್ ಸಾಗರ್ ಛಾಯಾಚಿತ್ರಗ್ರಹಣ, ಸುನಿಲ್.ಎಸ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.