ಸಿನಿಮಾ ನಿರ್ದೇಶಕ ಸಿದ್ಧಾರ್ಥ್ ಶಿವಾ ಅವರನ್ನು ಮಾಲಿವುಡ್ ಕರೆಯುವುದು‘ಅವಾರ್ಡ್ ವಿನ್ನಿಂಗ್ ಡೈರೆಕ್ಟರ್’ ಎಂದೇ. ಅತಿ ಕಡಿಮೆ ಅವಧಿಯಲ್ಲಿ ತಮ್ಮ ನಿರ್ದೇಶನ ಸಾಮರ್ಥ್ಯವನ್ನು ತೋರಿಸಿಕೊಟ್ಟ ಸಿದ್ಧಾರ್ಥ್ ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಪಾರ್ವತಿ ಮೆನನ್ ಮತ್ತು ಆಸಿಫ್ ಅಲಿ ಈ ಚಿತ್ರಕ್ಕೆ ನಾಯಕ–ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಾಲ್ಕನೇ ಬಾರಿಗೆ ಜೋಡಿಯಾಗಿ ನಟಿಸುತ್ತಿರುವ ಖುಷಿ ಪಾರ್ವತಿ ಮತ್ತು ಆಸಿಫ್ ಅವರದು. ‘ಟೇಕಾಫ್’ 2017ರಲ್ಲೇ ತೆರೆಕಂಡಿದೆ. ‘ಉಯಾರೆ’ ಮತ್ತು ‘ವೈರಸ್’ ಬಿಡುಗಡೆಯಾಗಬೇಕಿದೆ. ಅಷ್ಟರಲ್ಲೇ ಸಿದ್ಧಾರ್ಥ್ ಕ್ಯಾಂಪ್‌ನಿಂದ ಕರೆ ಬಂದಿದೆ.

ನಿರ್ದೇಶಕ ಸಿದ್ಧಾರ್ಥ ತಮ್ಮ ಸಾಮರ್ಥ್ಯವನ್ನು ಮೊದಲ ಚಿತ್ರ ‘101 ಚೋದ್ಯಂಗಳ್’ನಲ್ಲೇ ಸಾಬೀತು ಮಾಡಿದವರು. 2012ರಲ್ಲಿ ತೆರೆ ಕಂಡ ಈ ಚಿತ್ರಕ್ಕೆ ಅತ್ಯುತ್ತಮ ಹೊಸ ನಿರ್ದೇಶಕ ಎಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದವರು ಸಿದ್ಧಾರ್ಥ್. ಮರುವರ್ಷವೂ ಅದೇ ಪ್ರಶಸ್ತಿಯನ್ನು ತಮ್ಮ ತಿಜೋರಿಗೆ ಹಾಕಿಕೊಂಡರು. 2017ರ ಚಿತ್ರ ‘ಸಖಾವು’ ನಂತರ ಅವರ ಚಿತ್ರಗಳು ತೆರೆಕಾಣದಿದ್ದರೂ ಸಿದ್ಧಾರ್ಥ್ ಸುಮ್ಮನೆ ಕೂತಿರಲಿಲ್ಲ. ಭವಿಷ್ಯದ ಯೋಜನೆಗಳಿಗೆ ಸರಕು ಪೋಣಿಸುತ್ತಿದ್ದರು!

ಸಿದ್ಧಾರ್ಥ ನಿರ್ದೇಶನದ ಚಿತ್ರಗಳೆಂದರೆ ಗಟ್ಟಿಕಾಳುಗಳೇ ಎಂಬುದು ಪ್ರೇಕ್ಷಕರಿಗೂ ಗೊತ್ತಿದೆ. ಹಾಗಾಗಿ ಪಾರ್ವತಿ ಮೆನನ್ ಮತ್ತು ಆಸಿಫ್ ಅಲಿ ಜೋಡಿಯ ಹೊಸ ಚಿತ್ರವೂ ಸೂಪರ್ ಹಿಟ್ ಆಗಲಿದೆ ಎಂಬುದು ಮಾಲಿವುಡ್ ಚಿತ್ರ ವಿಮರ್ಶಕರ ವಾದ. ನಾಯಕ ಮತ್ತು ನಾಯಕಿಯರ ಕಾಲ್‌ಶೀಟ್ ಪಡೆದಿರುವ ಬೆನ್ಸಿ ಪ್ರೊಡಕ್ಷನ್ಸ್‌ನ ನಿರ್ಮಾಪಕರು ಇತರ ತಾರಾಗಣವನ್ನು ಕಲೆಹಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.