ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರ ಜನ್ಮದಿನವನ್ನು, ನೋವಿನಲ್ಲೂ ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ಧತೆ ಆರಂಭಿಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಕೂಡಾ ಒಬ್ಬ ಅಭಿಮಾನಿಯಾಗಿ ಪುನೀತ್ ಅವರ ಕುರಿತು ‘ಪವರಿಸಂ–ಡ್ಯಾನ್ಸ್ ವಿದ್ ಅಪ್ಪು’ ಎಂಬ ಹಾಡೊಂದನ್ನು ಬರೆದಿದ್ದಾರೆ. ಎಂಆರ್ಟಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ನಲ್ಲಿ ಈ ಹಾಡು ಬಿಡುಗಡೆಯಾಗಿದೆ.

‘ಆಕಾಶ’ದಿ ‘ಅಭಿ’ಯಾಗಿ ಕನ್ನಡ ‘ಪೃಥ್ವಿ’ಗೆ ನೀ ‘ಅರಸು’ ಎಂದು ಆರಂಭವಾಗುವ ಈ ಹಾಡಿನಲ್ಲಿ, ‘ಪ್ರೇಮದ ಕಾಣಿಕೆ’ಯಿಂದ ಹಿಡಿದು ‘ಲಕ್ಕಿ ಮ್ಯಾನ್’ ಸಿನಿಮಾದವರೆಗೆ ಪುನೀತ್ ರಾಜ್ಕುಮಾರ್ ಅವರು ನಟಿಸಿದ ಎಲ್ಲ ಸಿನಿಮಾಗಳ ಶೀರ್ಷಿಕೆ ಇದೆ. ಶೀರ್ಷಿಕೆಯನ್ನೇ ಬಳಸಿಕೊಂಡು ಹಾಡಿನ ಸಾಹಿತ್ಯ ರಚಿಸಿರುವುದು ಇಲ್ಲಿನ ವಿಶೇಷ. ತಮ್ಮ ಆಕರ್ಷಕ ಡ್ಯಾನ್ಸ್ ಮೂಲಕ ಪುನೀತ್ ಈ ಹಾಡಿನಲ್ಲಿ ಮತ್ತೆ ಜೀವಿಸಿದ್ದಾರೆ. ನೆಚ್ಚಿನ ಅಪ್ಪುವನ್ನು ಕಂಡು ಅಭಿಮಾನಿಗಳು ಭಾವುಕರಾಗಿದ್ದಾರೆ. ಹಾಡನ್ನು ವೀಕ್ಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

‘ಆರು ತಿಂಗಳ ಮಗುವಾಗಿದ್ದಾಗಲೇ ಅಪ್ಪು ಅವರು ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ನಾನು ಒಬ್ಬ ನಿರ್ದೇಶಕನಾಗಿ, ಚಿತ್ರಸಾಹಿತಿಯಾಗಿ ಈ ಹಾಡನ್ನು ಬರೆದಿಲ್ಲ. ಅಪ್ಪು ಅವರ ಅಭಿಮಾನಿಯಾಗಿ ನಾನು ಈ ಹಾಡನ್ನು ಬರೆದಿದ್ದೇನೆ. ಅವರು ಕಿಂಗ್ ಆಫ್ ದಿ ಸಿನಿಮಾ’ ಎನ್ನುತ್ತಾರೆ ಪವನ್.

ಲಿಂಕ್:

https://www.youtube.com/watch?v=lERwdcEULRw

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.