ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಹರೀಶ್ ಸೀನಪ್ಪ ಇದೀಗ ಬೆಳ್ಳಿಪರದೆ ಮೇಲೆ ಹೀರೊ ಆಗಿ ಬರುತ್ತಿದ್ದಾರೆ. ‘ಬಾಂಡ್ ರವಿ’ ಸಿನಿಮಾ ನಿರ್ದೇಶಿಸಿದ್ದ ಪ್ರಜ್ವಲ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಕ್ರೆಡಿಟ್ ಕುಮಾರ’ ಸಿನಿಮಾದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ನಡೆಯಿತು.

ನಟ ಧ್ರುವ ಸರ್ಜಾ ಚಿತ್ರಕ್ಕೆ ಚಾಲನೆ ನೀಡಿದರು. ನಿರ್ದೇಶಕ ಎಸ್.ಮಹೇಂದರ್, ನಿರ್ಮಾಪಕ ಉದಯ್ ಮೆಹ್ತಾ, ನಟ ಪ್ರಮೋದ್ ಹಾಗೂ ನಿರ್ಮಾಪಕ ನರಸಿಂಹ, ಪಾನಿಪುರಿ ಕಿಟ್ಟಿ, ಮಾಸ್ತಿ, ಅಣಜಿ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ಕುಮಾರನಾಗಿ ಬಣ್ಣದ ಪಯಣ ಆರಂಭಿಸಿದ್ದೇನೆ. 2009ರಲ್ಲಿ ಮೊದಲು ಕೇಬಲ್ ಚಾನಲ್‌ನಲ್ಲಿ ಕೆಲಸ ಮಾಡುವಾಗ ಬಣ್ಣ ಹಚ್ಚಿದ್ದು. ಅವತ್ತು ಕಲಾವಿದ ಆಗಬೇಕು ಎಂದು ಅಂದುಕೊಂಡಿದ್ದೆ. ಈಗ ಆ ಕನಸು ನನಸಾಗಿದೆ. ನಟನೆಯ ತರಗತಿಗೆ ಹೋಗುತ್ತಿದ್ದೇನೆ. ನಾಯಕಿ ಪಾಯಲ್ ಜೊತೆಗೆ ವರ್ಕ್‌ಶಾಪ್‌ಗಳನ್ನೂ ನಡೆಸಿ ದೃಶ್ಯಗಳ ರಿಹರ್ಸಲ್ ಮಾಡುತ್ತಿದ್ದೇನೆ. ಈ ಅನುಭವ ನನಗೆ ಬೇಕಿತ್ತು. ಈ ಅನುಭವ ಇಲ್ಲ ಅಂದಿದ್ರೆ ನನ್ನ ಜೀವನ ಅಪೂರ್ಣ ಆಗುತ್ತಿತ್ತು’ ಎಂದರು ಹರೀಶ್.

ಸಾಲ ಮಾಡಿಕೊಂಡು ಒದ್ದಾಡುವ ಒಬ್ಬ ಕ್ಯಾಬ್ ಡ್ರೈವರ್‌ನ ಕಥೆ ಇದಾಗಿದೆ ಎಂದಿದೆ ಚಿತ್ರತಂಡ. ‘ಕ್ರೆಡಿಟ್ ಕುಮಾರ’ನಾಗಿ ಹರೀಶ್ ಬಣ್ಣಹಚ್ಚಿದ್ದು, ನಾಯಕಿ ಪಾತ್ರದಲ್ಲಿ ಪಾಯಲ್ ಚಂಗಪ್ಪ ನಟಿಸುತ್ತಿದ್ದಾರೆ. ಕಿರುಚಿತ್ರಗಳ ಮೂಲಕ ಖ್ಯಾತಿಗಳಿಸಿರುವ ಪಾಯಲ್ ಇದೀಗ ನಾಯಕಿಯಾಗಿ ಬೆಳ್ಳಿಪರದೆಗೆ ಹೆಜ್ಜೆ ಇಡುತ್ತಿದ್ದಾರೆ. ಈ ಸಿನಿಮಾವನ್ನು ವಾಗೀಶ್ ಮುತ್ತಿಗೆ ನಿರ್ಮಾಣ ಮಾಡುತ್ತಿದ್ದು, ಸಿನಿಮಾಗೆ ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಗೂ ‘ಭರ್ಜರಿ’ ಚೇತನ್ ಸಾಹಿತ್ಯವಿದೆ. ಸದ್ಯ ಮುಹೂರ್ತ ಮಾಡಿಕೊಂಡಿರುವ ತಂಡ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.