ಚೆನ್ನೈ: ಕಳೆದ ವರ್ಷ ಸೆಪ್ಟೆಂಬರ್ ಅಂತ್ಯದಲ್ಲಿ ತೆರೆ ಕಂಡು ಭರ್ಜರಿ ಯಶಸ್ಸು ಸಾಧಿಸಿದ್ದ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರದ ಎರಡನೇ ಭಾಗದ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ.

ಈ ಪ್ರಯುಕ್ತ ಪೊನ್ನಿಯನ್ ಸೆಲ್ವನ್ 2 ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಎರಡನೇ ಭಾಗದ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.

ಈ ವರ್ಷ ಏಪ್ರಿಲ್ 28ರಂದು ಪೊನ್ನಿಯನ್ ಸೆಲ್ವನ್–2 ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.

ನಟ ವಿಕ್ರಂ, ಐಶ್ವರ್ಯಾ ರೈ, ಜಯಂ ರವಿ, ಕಾರ್ತಿ, ತ್ರಿಷಾ ಮೊದಲಾದ ದೊಡ್ಡ ತಾರಾ ಬಳಗವನ್ನು ಹೊಂದಿರುವ ಪೊನ್ನಿಯನ್ ಸೆಲ್ವನ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನೋಡುಗರು ಚಿತ್ರವನ್ನು ದೃಶ್ಯವೈಭವ ಎಂದೇ ಬಣ್ಣಿಸಿದ್ದರು. ಗಳಿಕೆಯಲ್ಲೂ ಭರ್ಜರಿ ಯಶಸ್ಸು ದಾಖಲಿಸಿದ ಚಿತ್ರವನ್ನು ಎರಡು ಭಾಗಗಳಲ್ಲಿ ಶೂಟಿಂಗ್ ಮಾಡಿರುವುದಾಗಿ ಚಿತ್ರತಂಡ ಈ ಹಿಂದೆಯೇ ಹೇಳಿತ್ತು.

ಎರಡನೇ ಭಾಗದಲ್ಲೂ ಬಹುತೇಕ ಇದೇ ತಾರಾಗಣವನ್ನು ಈ ಚಿತ್ರ ಹೊಂದಿದ್ದು, ಅರುಣ್ಮೋಳಿವರ್ಮನ್ ಪಾತ್ರದಲ್ಲಿ ಮಿಂಚಿರುವ ಜಯಂ ರವಿ ಸುತ್ತ ಎರಡನೇ ಭಾಗ ಸುತ್ತುತ್ತದೆ ಎನ್ನಲಾಗಿದೆ.

2019ರಿಂದ 150 ದಿನಗಳ ಕಾಲ ಚಿತ್ರದ ಎರಡೂ ಭಾಗಗಳನ್ನು ಚಿತ್ರೀಕರಿಸಲಾಗಿದೆ ಎಂದು ನಟ ಜಯಂ ರವಿ ಸಂದರ್ಶನವೊಂದರಲ್ಲಿ ಹೇಳಿದ್ದರು. 1955ರಲ್ಲಿ ಪ್ರಕಟಿತ ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಐತಿಹಾಸಿಕ ಚಿತ್ರ ಪೊನ್ನಿಯಿನ್. ಮಣಿರತ್ನಂ ಸುಂದರ ದೃಶ್ಯಗಳಿಗೆ ತಕ್ಕಂತೆ ಎ.ಆರ್.ರೆಹಮಾನ್ ಅತ್ಯದ್ಬುತ ಸಂಗೀತ ನೀಡಿದ್ದಾರೆ.

ಓದಿ... ತಾಯಿ –ತಂದೆ ಬಳಿಕ ರಾಹುಲ್ ಗಾಂಧಿ ಜೀವನದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ: ರಮ್ಯಾ

‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ಒಟಿಟಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.