ನವದೆಹಲಿ: ರಾಷ್ಟ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶನದ, ಪೃಥ್ವಿರಾಜ್ ಸುಕುಮಾರನ್ ಅಭಿನಯದ ನೈಜ ಘಟನೆ ಆಧರಿತ ‘ದಿ ಗೋಟ್ ಲೈಫ್‘ (ಆಡು ಜೀವಿತಂ) ಚಿತ್ರವು ಜುಲೈ 19ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
.ಗೋವಾಕ್ಕೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ: ಶಾಲೆಗಳಿಗೆ ಇಂದು ರಜೆ.ಅನಂತ್–ರಾಧಿಕಾ ಮದುವೆ: ಬಚ್ಚನ್ ಕುಟುಂಬದಿಂದ ಅಂತರ ಕಾಯ್ದುಕೊಂಡರೇ ಐಶ್ವರ್ಯಾ ರೈ?.
ಈ ಸಂಬಂಧ ಒಟಿಟಿ ವೇದಿಕೆ ‘ನೆಟ್ಫ್ಲಿಕ್ಸ್’ ಸಾಮಾಜಿಕ ಜಾಲತಾಣ ‘ಎಕ್ಸ್‘ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದೆ.

ಈ ಚಿತ್ರ ಮಲಯಾಳಂ ಸಾಹಿತ್ಯ ಪ್ರಪಂಚದ ಅತ್ಯಂತ ಜನಪ್ರಿಯ ಕಾದಂಬರಿ ‘ಆಡು ಜೀವಿತಂ’ ಆಧರಿಸಿದೆ. ಈ ಕಾದಂಬರಿ 12 ಭಾಷೆಗಳಲ್ಲಿ ಅನುವಾದಗೊಂಡಿದೆ. ಸೌದಿ ಅರೇಬಿಯಾದಲ್ಲಿ ವಲಸೆ ಕಾರ್ಮಿಕರೊಬ್ಬರು ಗುಲಾಮಗಿರಿಗೆ ಒಳಗಾಗುವ ಮೂಲಕ ಆತ ಎದುರಿಸುವ ಸವಾಲುಗಳ ಸುತ್ತ ಚಿತ್ರಕಥೆ ಮೂಡಿಬಂದಿದೆ.
.PHOTOS | ಅಪ್ಸರೆಯಂತೆ ಕಣ್ಮನ ಸೆಳೆದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ .ಕೇರಳ | ಕೃಷಿ ಹೊಂಡ ಅಗೆಯುವ ವೇಳೆ ಮಹಿಳೆಯರಿಗೆ ಭಾರಿ ಮೌಲ್ಯದ ನಿಧಿ ಪತ್ತೆ.
ವಿಷ್ಯುವಲ್ ರೊಮ್ಯಾನ್ಸ್ ಇದನ್ನು ನಿರ್ಮಿಸಿದೆ. ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಕೆ.ಆರ್.ಗೋಕುಲ್ ಮತ್ತು ಪ್ರಸಿದ್ಧ ಅರಬ್ ನಟರಾದ ತಾಲಿಬ್ ಅಲ್ ಬಲೂಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್.ರೆಹಮಾನ್ ಮತ್ತು ರಸೂಲ್ ಪೂಕುಟ್ಟಿ ಅವರ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸ ಈ ಚಿತ್ರಕ್ಕಿದೆ.

ಈ ಚಿತ್ರ ಹಿಂದಿ, ಮಲಯಾಳಂ, ತಮಿಳು, ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ಮಾರ್ಚ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.