ಮುಂಬೈ: ಹಿಂದಿ ಹಾಗೂ ಇಂಗ್ಲಿಷ್ ಚಿತ್ರಗಳಲ್ಲಿ ನಟಿಸುವ ಮೂಲಕ ಗ್ಲೋಬಲ್ ಸ್ಟಾರ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ ಜೋನ್ಸ್ ಅವರು ಮರಾಠಿ ಚಿತ್ರ ‘ಪಾನಿ’ಯನ್ನು ನಿರ್ಮಿಸಿದ್ದಾರೆ.

ರಾಜಶ್ರೀ ಎಂಟರ್‌ಟೈನ್ಮೆಂಟ್ ಹಾಗೂ ಕೊಠಾರೆ ವಿಷನ್ ಕಂಪನಿಗಳು ಜಂಟಿಯಾಗಿ ನಿರ್ಮಿಸುತ್ತಿರುವ ಈ ಮರಾಠಿ ಚಿತ್ರಕ್ಕೆ ಚೋಪ್ರಾ ಅವರೂ ಕೈಜೋಡಿಸಿದ್ದಾರೆ. ಇದು ಆದಿನಾಥ್ ಎಂ. ಕೊಠಾರೆ ಅವರ ನಿರ್ದೇಶನದ ಚೊಚ್ಚಲ ಸಿನಿಮಾ ಆಗಿದ್ದು ಅ. 18ರಂದು ತೆರೆ ಕಾಣಲಿದೆ.

ಈ ವಿಷಯವನ್ನು ಪರ್ಪಲ್ ಪೆಬ್ಬೆಲ್ ಪಿಕ್ಚರ್ಸ್ ಸಂಸ್ಥಾಪಕರಾಗಿರುವ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಇದು ಅತ್ಯಂತ ವಿಶೇಷವಾದ ಸಂಗತಿ. ನಮ್ಮ ಮರಾಠಿ ಚಿತ್ರ ‘ಪಾನಿ’ ಅ. 18ರಂದು ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ಭೇಟಿಯಾಗೋಣ. ಜಗತ್ತು ಎದುರಿಸುತ್ತಿರುವ ಅತಿ ಮುಖ್ಯವಾದ ನೀರಿನ ಸಮಸ್ಯೆ ಮತ್ತು ಅದಕ್ಕೆ ಕಂಡುಕೊಂಡ ಪರಿಹಾರ ಕುರಿತಾದ ಚಿತ್ರ ಇದು. ಇದು ಒಬ್ಬ ವ್ಯಕ್ತಿಯ ಬದುಕಿನ ಕಥೆಯಾಗಿದೆ. ಕ್ಷಿಪ್ರ ಬದಲಾವಣೆ ಮೂಲಕ ವ್ಯಕ್ತಿ ತನ್ನ ಸುತ್ತಲಿನ ಜಗತ್ತಿನಲ್ಲಿ ತರುವ ಬದಲಾವಣೆಯನ್ನು ‘ಪಾನಿ’ ಚಿತ್ರದ ಮೂಲಕ ನೋಡಬಹುದು’ ಎಂದು ಬರೆದುಕೊಂಡಿದ್ದಾರೆ.

‘ಹೊಸ ಪ್ರತಿಭೆಗಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುವುದಕ್ಕೆ ಸಂತಸವಿದೆ. ಹಾಗೆಯೇ ಭಾರತದ ಪ್ರತಿಯೊಂದು ಭಾಗದ ಸ್ಥಳೀಯ ಪ್ರೇರಣಾದಾಯಕ ಕಥೆಗಳನ್ನು ಆಧರಿಸಿದ ಚಿತ್ರ ಮಾಡುವ ಯೋಜನೆ ಇದೆ. ಇದಕ್ಕೊಂದು ಉದಾಹರಣೆ ‘ಪಾನಿ’ ಚಿತ್ರ. ಮರಾಠಿಯಲ್ಲಿ ಇದು ನಮ್ಮ ನಾಲ್ಕನೇ ಚಿತ್ರವಾಗಿದೆ’ ಎಂದಿದ್ದಾರೆ.

‘ಪಾನಿ’ ಚಿತ್ರಕ್ಕೆ ನಿತಿನ್ ದೀಕ್ಷಿತ್ ಅವರ ಕಥೆ ಇದೆ. ಮುಖ್ಯ ಭೂಮಿಕೆಯಲ್ಲಿ ಆದಿನಾಥ್ ಎಂ. ಕೊಠಾರೆ, ರುಚಾ ವೈಧ್ಯ, ಸುಬೋಧ್ ಭಾವೆ, ರಜತ್ ಕಪೂರ್, ಕಿಶೋರ್ ಕದಂ, ನಿತಿನ್ ದೀಕ್ಷಿತ್, ಸಚಿನ್ ಗೋಸ್ವಾಮಿ, ಮೋಹನ್‌ಬಾಯಿ, ಶ್ರೀಪಾದ್ ಜೋಶಿ ಹಾಗೂ ವಿಕಾಶ್ ಪಾಂಡುರಂಗ ಪಾಟೀಲ್ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.