ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರು ಅಗಲಿ ಮೂರು ವರ್ಷ ಉರುಳಿದೆ. ಮಂಗಳವಾರ (ಅ.29) ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ಮಗಳು ವಂದಿತಾ, ನಟ ರಾಘವೇಂದ್ರ ರಾಜ್ಕುಮಾರ್ ದಂಪತಿ ಸೇರಿದಂತೆ ಕುಟುಂಬದ ಸದಸ್ಯರು ಇಲ್ಲಿನ ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

2021ರ ಅ.29ರಂದು ಪುನೀತ್ ಅವರ ಅಕಾಲಿಕ ನಿಧನರಾಗಿದ್ದರು. ಪೂಜೆ ಸಲ್ಲಿಸಿದ ಬಳಿಕ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ವಂದಿತಾ ಅವರು ಪುನೀತ್ ಅವರ ನೆಚ್ಚಿನ ತಿಂಡಿ, ಸಿಹಿ ತಿನಿಸುಗಳನ್ನು ಎಡೆ ಇಟ್ಟರು. ವರ್ಷ ಉರುಳಿದಂತೆ ಪುನೀತ್ ಅವರ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಂಗಳವಾರವೂ ಸಾವಿರಾರು ಜನರು ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಮೈಸೂರು ದಸರಾ ವಿದ್ಯುದ್ದೀಪಾಲಂಕಾರ ಮಾಡಿದವರೇ ಸಮಾಧಿ ಸುತ್ತಮುತ್ತ ವಿದ್ಯುದ್ದೀಪಾಲಂಕಾರ ಮಾಡಿದ್ದಾರೆ. ಪುಣ್ಯಭೂಮಿಯ ಆವರಣದಲ್ಲೇ ಅಭಿಮಾನಿಗಳು ನೇತ್ರದಾನದ ಪ್ರತಿಜ್ಞೆ ತೆಗೆದುಕೊಂಡರು. ಅನ್ನದಾನ ಮತ್ತು ರಕ್ತದಾನದ ಕಾರ್ಯಗಳೂ ನಡೆದವು. ಪುನೀತ್ ರಾಜ್ಕುಮಾರ್ ಹುಟ್ಟಿದ ವರ್ಷ, ನಿಧನರಾದ ವರ್ಷ ಹಾಗೂ 2024ರಲ್ಲಿ ಬಿಡುಗಡೆಗೊಂಡ ನಾಣ್ಯಗಳನ್ನು, ನೋಟ್ಗಳನ್ನು ಬಳಸಿಕೊಂಡು ರಚಿಸಿದ ಕಲಾಕೃತಿಗಳು ನೆರೆದವರನ್ನು ಸೆಳೆದವು.

‘ಪ್ರತಿನಿತ್ಯವೂ ಅವನ ನೆನಪಿನಲ್ಲೇ ಇದ್ದೇವೆ. ದುಃಖ ಇನ್ನೂ ಇದೆ. ಜನಗಳ ಪ್ರೀತಿ ಕಮ್ಮಿ ಆಗುತ್ತಲೇ ಇಲ್ಲ. ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪುನೀತ್ ಅವರ ಗುಣಗಳನ್ನು ನಿಮ್ಮಲ್ಲೂ ಮುಂದುವರಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ನಟ ರಾಘವೇಂದ್ರ ರಾಜ್ಕುಮಾರ್ ಹೇಳಿದರು.
.ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ: ಮಿಂಚಿ ಮಾಯವಾದ ಮಂದಹಾಸ.ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಅಶ್ವಿನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.