ರಾಯಚೂರು: ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರು ಮಂತ್ರಾಲಯಕ್ಕೆ ಗುರುವಾರ ಭೇಟಿ ಕೊಟ್ಟು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು.

ದರ್ಶನದ ಬಳಿಕ ಮಠದ ಪ್ರದಕ್ಷಿಣೆ ಮಾಡಿಕೊಂಡು, ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಬಳಿ ಹೋಗಿ ಆಶೀರ್ವಾದ ಪಡೆದರು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಯರ ದರ್ಶನಕ್ಕಾಗಿ ಈಚೆಗೆ ಬಂದಿರಲಿಲ್ಲ. ಈಗ ಅವಕಾಶ ಸಿಕ್ಕಿತು. ಮಂತ್ರಾಲಯದಲ್ಲಿರುವ ರಾಜಕುಮಾರ ಅತಿಥಿ ಭವನದ ನವೀಕರಣ ಪೂರ್ಣಗೊಂಡಿದೆ. ಇನ್ನು ಮುಂದೆ ಅದು ಸಾರ್ವಜನಿಕರ ಉಪಯೋಗಕ್ಕೆ ಬರಲಿದೆ’ ಎಂದರು.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ನಟ ಸಾರ್ವಭೌಮ ಚಿತ್ರವು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಐಟಿ ದಾಳಿ ಮುಗಿದು ಹೋಗಿರುವ ವಿಷಯ’ ಎಂದು ತಿಳಿಸಿದರು.

ಫೆಬ್ರುವರಿಯಲ್ಲಿ ಸುಜಯೀಂದ್ರ ತೀರ್ಥರ ಜನ್ಮಶತಮಾನೋತ್ಸವ ಕಾರ್ಯಕ್ರಮವಿದ್ದು, ಭಾಗವಹಿಸುವಂತೆ ಪೀಠದ ಸ್ವಾಮಿಗಳು ಆಹ್ವಾನ ನೀಡಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.