ಬೆಂಗಳೂರು:‘ಪಾಲ್ಪಿಟೇಷನ್ಸ್’ (ಅನಾರೋಗ್ಯದ ಕಾರಣ ಹೃದಯಬಡಿತದಲ್ಲಿ ಆಗುವ ಏರುಪೇರು) ಕಾರಣದಿಂದ ಕಳೆದ ಮಂಗಳವಾರ ಸಂಜೆ ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದ ನಟ ರಾಘವೇಂದ್ರ ರಾಜ್ಕುಮಾರ್, ಗುರುವಾರ ಮನೆಗೆ ತೆರಳಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹೃದಯಬಡಿತದಲ್ಲಿ ಸ್ವಲ್ಪ ಏರುಪೇರು ಕಾಣಿಸಿಕೊಂಡಿತ್ತು. ಹೀಗಾಗಿ ಆಸ್ಪತ್ರೆಗೆ ಬಂದು ದಾಖಲಾದೆ. ಇದೇ ಆಸ್ಪತ್ರೆಗೆ ಈ ಹಿಂದೆ ಸ್ಟ್ರೋಕ್ ಆದಾಗ ಬಂದು ಚಿಕಿತ್ಸೆಗಾಗಿ ದಾಖಲಾಗಿದ್ದೆ. ಆ್ಯಂಜಿಯೊಗ್ರಾಮ್ ಮಾಡಿದ ಬಳಿಕ ಪೇಸ್ಮೇಕರ್(ಹೃದಯಬಡಿತ ನಿಯಂತ್ರಿಸುವ ಉಪಕರಣ) ಹಾಕಿದ್ದಾರೆ. ಇನ್ನೊಂದು ವಾರದಲ್ಲಿ ಮತ್ತೆ ಶೂಟಿಂಗ್ಗೆ ವಾಪಾಸಾಗಲಿದ್ದೇನೆ’ ಎಂದರು.

‘ನಿರಂತರವಾಗಿ ಚಿತ್ರೀಕರಣದಲ್ಲಿ ಭಾಗವಹಿಸಿದ ಕಾರಣ ಈ ರೀತಿ ಆಗಿದೆ ಎಂದು ಜನರು ಅಂದುಕೊಳ್ಳಬಹುದು. ಆದರೆ, ನಾನು ಬೇರೆ ಎಲ್ಲೋ ಇದ್ದಿದ್ದರೆ ಏನಾಗುತ್ತಿತ್ತೋ. ಅವತ್ತು ಚಿತ್ರೀಕರಣವೇ ನನ್ನನ್ನು ಕಾಪಾಡಿತು. ಚಿತ್ರೀಕರಣದಲ್ಲಿದ್ದ ಕಾರಣವೇ ತಕ್ಷಣವೇ ಆಸ್ಪತ್ರೆಗೆ ಬರಲು ಸಾಧ್ಯವಾಯಿತು. ನನ್ನ ಆರೋಗ್ಯದ ಬಗ್ಗೆ ನಾನು ಕಾಳಜಿ ತೆಗೆದುಕೊಳ್ಳುತ್ತಿದ್ದೇನೆ. ಜನರ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದದ ಶಕ್ತಿಯೇ ನನ್ನನ್ನು ಕಾಪಾಡುತ್ತದೆ’ ಎಂದರು. ಈ ಸಂದರ್ಭದಲ್ಲಿ ಶಿವರಾಜ್ಕುಮಾರ್ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.