ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರ ಬಂಧನವೇ ಕಾನೂನು ಬಾಹಿರ ಎಂದು ಕುಂದ್ರಾ ಅವರ ವಕೀಲ ಸುಭಾಷ್ ಜಾಧವ್ ಹೇಳಿದ್ದಾರೆ.

ಇದುವರೆಗೆ ಪತ್ತೆಯಾದ ಸಾಕ್ಷ್ಯಗಳ ಪೈಕಿ ಒಂದೇ ಒಂದು ‘ಅಶ್ಲೀಲ’ ವಿಡಿಯೋ ಅಥವಾ ಪೋರ್ನ್ ಕಂಟೆಂಟ್ ಅನ್ನುವುದು ಇಲ್ಲ. ಎಲ್ಲಿಯೂ ಕೂಡಾ ಲೈಂಗಿಕ ಕ್ರಿಯೆಯನ್ನು ತೋರಿಸುವ ಸಾಕ್ಷ್ಯಗಳು ಪೊಲೀಸರ ಬಳಿ ಇಲ್ಲ. ಅವರ ಮೇಲೆ ಹಾಕಿರುವ ಇತರ ಪ್ರಕರಣಗಳು ಜಾಮೀನಿಗೆ ಅರ್ಹವೇ ಆಗಿವೆ. ಹಾಗಿದ್ದರೂ 4 ಸಾವಿರ ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಈ ಹಿಂದೆ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಮುನಾವರ್ ಫಾರೂಕ್ವಿ ಎಂಬುವವರನ್ನು ಇದೇ ಆಧಾರದಲ್ಲಿ ಬಿಡುಗಡೆ ಮಾಡಿತ್ತು’ ಎಂದರು.

‘ಅಶ್ಲೀಲ ಚಿತ್ರಗಳಿಂದ ಗಳಿಸಿದ ಹಣದಿಂದ ಕುಂದ್ರಾ ಅವರು ಆನ್ಲೈನ್ ಬೆಟ್ಟಿಂಗ್ಗೆ ಬಳಸುತ್ತಿದ್ದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕಾಗಿ ಯೆಸ್ ಬ್ಯಾಂಕ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಆಫ್ರಿಕಾದಲ್ಲಿ ಕುಂದ್ರಾ ಅವರ ಖಾತೆಯ ವಹಿವಾಟನ್ನು ಪರಿಶೀಲಿಸಲು ಪೊಲೀಸರು ಮುಂದಾಗಿದ್ದಾರೆ’ ಎಂದು ಎಎನ್ಐ ಸುದ್ದಿ ಸಂಸ್ಥೆ ಹೇಳಿದೆ.

ಇದನ್ನೂ ಓದಿ:ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ ನಿವಾಸದ ಮೇಲೆ ಅಪರಾಧ ವಿಭಾಗದ ಅಧಿಕಾರಿಗಳ ದಾಳಿ

ಹೊಸ ಆ್ಯಪ್ನಲ್ಲಿ ಶಮಿತಾ ಶೆಟ್ಟಿ?
ಈ ನಡುವೆ ರಾಜ್ ಕುಂದ್ರಾ ಅವರು ‘ಬಾಲಿ ಫೇಮ್’ ಎಂಬ ಹೊಸ ಆ್ಯಪ್ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದರು. ಅದರಲ್ಲಿ ಶಮಿತಾ ಶೆಟ್ಟಿ ಅವರ ಮೂಲಕ ಹೊಸ ಶೋ ರೂಪಿಸಲು ಸಿದ್ಧತೆ ಮಾಡಿದ್ದರು ಎಂದು ನಟಿ ಗೆಹನಾ ವಸಿಷ್ಠ ಮುಂಬೈನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ರಾಜ್ ಬಂಧನಕ್ಕೂ ಮೊದಲು ನಾನು ಅವರ ಕಚೇರಿಗೆ ಹೋಗಿದ್ದೆ. ಅವರು ಹೊಸ ಆ್ಯಪ್ ರೂಪಿಸುವ ಬಗ್ಗೆ ಯೋಜನೆ ಹಾಕುತ್ತಿದ್ದರು. ಈ (ಬಾಲಿಫೇಮ್) ಆ್ಯಪ್ನಲ್ಲಿ ‘ಬೋಲ್ಡ್’ ಅಲ್ಲದ ವಿಡಿಯೋ ಸರಣಿ, ಬಾಲಿವುಡ್ಗೆ ಸಂಬಂಧಿಸಿದ ವಿಷಯಗಳು, ರಿಯಾಲಿಟಿ ಶೋಗಳು ಮತ್ತು ಮ್ಯೂಸಿಕ್ ವಿಡಿಯೋಗಳನ್ನು ರೂಪಿಸಲು ಯೋಜನೆ ಹಾಕಿಕೊಂಡಿದ್ದರು. ನಾನು ಮತ್ತು ಶಮಿತಾ ಶೆಟ್ಟಿ, ಸಾಯಿ ತಮಂಕರ್ ಅವರು ಸೇರಿದಂತೆ ಹಲವು ಕಲಾವಿದರನ್ನು ಬಳಸಿಕೊಂಡು ಕಾರ್ಯಕ್ರಮ ಮಾಡುವ ಯೋಜನೆ ಇತ್ತು’ ಎಂದು ಗೆಹನಾ ಹೇಳಿದ್ದಾರೆ.

ಇದನ್ನೂ ಓದಿ:ಅಶ್ಲೀಲ ಚಿತ್ರ ನಿರ್ಮಾಣ: ಕುಂದ್ರಾ ಪೊಲೀಸ್ ಕಸ್ಟಡಿ ಜುಲೈ 27ರವರೆಗೆ ವಿಸ್ತರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.