ನವದೆಹಲಿ: ಭಾರತದ 50ನೇ ಅಂತರರಾಷ್ಟ್ರೀಯ ಚಲನಚಿತ್ರ ಸಮ್ಮೇಳನದಲ್ಲಿ (ಐಎಫ್ಎಫ್ಐ) ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ‘ಐಕಾನ್ ಆಫ್ ಗೋಲ್ಡನ್ ಜುಬಿಲಿ’ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಸಮ್ಮೇಳನವು ಗೋವಾದಲ್ಲಿ ಇದೇ 20ರಿಂದ 28ರವರೆಗೆ ನಡೆಯಲಿದೆ. ವಿವಿಧ ದೇಶಗಳ 250ಕ್ಕೂ ಅಧಿಕ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ರಷ್ಯಾ ಈ ಸಮ್ಮೇಳನದ ಸಹಭಾಗಿತ್ವ ಹೊಂದಿರುವ ದೇಶವಾಗಿದೆ.

‘ಸಮ್ಮೇಳನದ ತೀರ್ಪುಗಾರರ ಸಮಿತಿ ಹಿರಿಯ ನಟ ರಜನಿಕಾಂತ್ ಅವರಿಗೆ ‘ವಿಶೇಷ ಪ್ರಶಸ್ತಿ’ ನೀಡಲು ಶಿಫಾರಸು ಮಾಡಿದೆ. ಇದು ಸಮ್ಮೇಳನದ ಆಕರ್ಷಣೆಯಾಗಲಿದೆ’ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ರಜನಿಕಾಂತ್ ಕೃತಜ್ಞತೆ: ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸುವ ನಿರ್ಧಾರಕ್ಕೆ ನಟ ರಜನಿಕಾಂತ್ ಕೃತಜ್ಞತೆ ಸಲ್ಲಿಸಿದ್ದಾರೆ. ‘ಈ ಪ್ರತಿಷ್ಠಿತ ಗೌರವಕ್ಕಾಗಿ ನಾನು ಭಾರತ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.