ರಣವೀರ್ ಸಿಂಗ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ’ಸಿಂಬಾ’ ಸಿನಿಮಾದ ಟ್ರೇಲರ್ ಸೋಮವಾರ ಬಿಡುಗಡೆಯಾಗಿದೆ. ಮೂರು ನಿಮಿಷಗಳ ಸಿಂಬಾ ಟ್ರೇಲರ್ ನೋಡಿರುವ ಸಿನಿಮಾ ಪ್ರಿಯರು, 2011ರ ಸೂಪರ್ ಹಿಟ್ ಚಿತ್ರ ಸಿಂಗಂ ನೆನಪು ಮಾಡಿಕೊಂಡಿದ್ದಾರೆ. ಅದಾಗಲೇ ಚಿತ್ರದ ಬಗ್ಗೆ ಟ್ರೋಲ್ಗಳೂ ಹರಿದಾಡುತ್ತಿವೆ.

2015ರಲ್ಲಿ ತೆರೆಕಂಡ ತೆಲುಗಿನ ’ಟೆಂಪರ್’ ಚಿತ್ರದ ರಿಮೇಕ್ ಸಿಂಬಾ. ರೋಹಿತ್ ಶೆಟ್ಟಿ ನಿರ್ದೇಶನ ಮತ್ತು ಕರಣ್ ಜೋಹರ್ ನಿರ್ಮಾಣದ ಸಿಂಬಾ, ಪೊಲೀಸ್ ಅಧಿಕಾರಿಯಾಗಿ ಬೆಳೆಯುವ ಅನಾಥ ಬಾಲಕನೊಬ್ಬನ ಕಥೆಯನ್ನು ಒಳಗೊಂಡಿದೆ. ಪೊಲೀಸ್ ಅಧಿಕಾರ, ಅವಕಾಶಗಳನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ದುಡ್ಡು ಮಾಡುವ ದಾರಿ ಕಂಡುಕೊಂಡ ಎಸಿಪಿ ಸಂಗ್ರಾಮ್ ಭಾಲೇರಾವ್ ಆಗಿ ರಣವೀರ್ ಸಿಂಗ್ ಅಭಿನಯಿಸಿದ್ದಾರೆ.

ಕೆಲವು ಮಹಿಳೆಯರ ಸ್ನೇಹ ಬೆಳೆಸಿಕೊಳ್ಳುವ ಎಸಿಪಿ, ಅವರು ತೊಂದರೆಗೀಡಾದ ನಂತರದಲ್ಲಿ ವ್ಯಕ್ತಿತ್ವವನ್ನೇ ಬದಲಿಸಿಕೊಳ್ಳುತ್ತ ಮುನ್ನಡೆಯುತ್ತಾನೆ. ಕೇದಾರ್ನಾಥ ಚಿತ್ರದಲ್ಲಿ ಅಭಿನಯಿಸಿರುವ ಸಾರಾ ಅಲಿ ಖಾನ್ ಇಲ್ಲಿ ನಾಯಕಿ. ಸಿಂಬಾ ಸಾರಾಗೆ ಎರಡನೇ ಸಿನಿಮಾ. ಅಜಯ್ ದೇವಗನ್ ಸಹ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇ ತಿಂಗಳ 28ರಂದು ಸಿನಿಮಾ ತೆರೆ ಕಾಣಲು ಸಜ್ಜಾಗಿದೆ.

ರಣವೀರ್ ಅಭಿಮಾನಿಗಳು ಟ್ರೇಲರ್ ಸೂಪರ್ ಎಂದಿದ್ದರೆ; ರೋಹಿತ್ ಶೆಟ್ಟಿ ನಿರ್ದೇಶನದ ಬಗ್ಗೆ ಟ್ರೋಲ್ಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 'ಸಿಂಗಂ ಜತೆಗೆ ದಬಾಂಗ್, ಅದರೊಂದಿಗೆ ಮರಾಠಿ ಶೈಲಿಯನ್ನು ಬೆರೆಸಿ; ಅಂತಿಮವಾಗಿ ‘ಸಿಂಬಾ’ ಸಿದ್ಧ’ ಎಂದು ಚಿತ್ರದ ತಯಾರಿಗೆ ಬಗೆಗೆ ಟ್ವೀಟ್ ಪ್ರಕಟಗೊಂಡಿವೆ.

’ಸಾಕು ಮಾಡಿ, ಜಾಸ್ತಿ ಆಯ್ತು..’ ಎಂದು ವೀಕ್ಷಕರು ರೋಹಿತ್ ಶೆಟ್ಟಿ ಮತ್ತು ಅಜಯ್ ದೇವಗನ್ಗೆ ಹೇಳುತ್ತಿದ್ದಾರೆ. ಸಿಂಬಾ ರೋಹಿತ್ ಶೆಟ್ಟಿ ಸಿಂಗಂ ಅನ್ನು ರೀಟ್ವೀಟ್ ಮಾಡಿದಂತೆ,...ಹೀಗೆ ಅನೇಕ ಟ್ವೀಟ್ಗಳು ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.