ಕ್ರೇಜಿಸ್ಟಾರ್ ರವಿಚಂದ್ರನ್, ದೊಡ್ಡ ತಾರಾ ಬಳಗದೊಂದಿಗೆ ಕಾನೂನು ಸಮರವೊಂದರ ತೀರ್ಪು ನೀಡಲು ಬರುತ್ತಿದ್ದಾರೆ. ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ ‘ದ ಜಡ್ಜ್ ಮೆಂಟ್’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು.

‘ಆಕ್ಸಿಡೆಂಟ್’, ‘ಲಾಸ್ಟ್ ಬಸ್’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಗುರುರಾಜ್ ಬಿ ಕುಲಕರ್ಣಿ ಈ ಚಿತ್ರದ ನಿರ್ದೇಶಕರು. ಜಿ9 ಕಮ್ಯೂನಿಕೇಷನ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿರುವ ಚಿತ್ರದಲ್ಲಿ ನಟ ದಿಗಂತ್, ನಟಿ ಧನ್ಯಾ ರಾಮ್‌ಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ರೂಪ ರಾಯಪ್ಪ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರಾಜೇಂದ್ರ ಕಾರಂತ್ ಮುಂತಾದವರು ನಟಿಸಲಿದ್ದಾರೆ.

ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆಗೂ ಇದು 4ನೇ ಚಿತ್ರವಾಗಿದೆ. ‘ಈ ಹಿಂದೆ ‘ಆಕ್ಸಿಡೆಂಟ್’ ಮಾಡಿ, ‘ಲಾಸ್ಟ್ ಬಸ್’ ಹತ್ತಿಕೊಂಡು ‘ಅಮೃತ ಅಪಾರ್ಟ್‌ಮೆಂಟ್’ ಪ್ರವೇಶಿಸಿದ ನಿರ್ದೇಶಕರು ಇದೀಗ ಕಾನೂನು ಸಮರದ ಜಡ್ಜ್‌ಮೆಂಟ್ ಕೇಳಿಕೊಂಡು ಬಂದಿದ್ದಾರೆ. ಕಥೆ ಉತ್ತಮವಾಗಿದೆ. ನನಗೆ ಈ ತಂಡ ಹಾಗೂ ಜಾನರ್ ಎರಡೂ ಹೊಸತು. ಆರು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಒಳ್ಳೆಯ ತಂಡದ ಜೊತೆ ಸಿನಿಮಾ ಮಾಡುತ್ತಿರುವ ಖುಷಿಯಿದೆ’ ಎಂದರು ರವಿಚಂದ್ರನ್.

‘ಇದೊಂದು ಕಾನೂನು ವ್ಯವಸ್ಥೆ ಕುರಿತಾದ ಚಿತ್ರ. ಶೀಘ್ರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ. ಅನೂಪ್ ಸೀಳಿನ್ ಸಂಗೀತ, ಶಿವು ಬಿ.ಕೆ.ಕುಮಾರ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ ಹಾಗೂ ಎಂ.ಎಸ್ ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ’ ಎಂದು ನಿರ್ದೇಶಕ ಗುರುರಾಜ ಬಿ ಕುಲಕರ್ಣಿ ಮಾಹಿತಿ ನೀಡಿದರು.

‘ನಾವೆಲ್ಲ ಸದ್ಯದಲ್ಲೇ ಮತ್ತೊಂದು ‘ಜಡ್ಜ್‌ಮೆಂಟ್’ಗಾಗಿ ಕಾಯುತ್ತಿದ್ದೇವೆ. ಅಷ್ಟರಲ್ಲಿ ಗುರುರಾಜ್ ಕುಲಕರ್ಣಿ ಮತ್ತು ತಂಡದವರ ‘ದ ಜಡ್ಜ್‌ಮೆಂಟ್’ ಶುರುವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ನಾಗಾಭರಣ ಹಾರೈಸಿದರು.

ದಿಗಂತ್, ಧನ್ಯ ರಾಮ್‌ಕುಮಾರ್ ತಮ್ಮ ಪಾತ್ರಗಳ ಕುರಿತು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.