ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ‘ಕಾಂತಾರ–2’ ಚಿತ್ರ ಸೆಟ್ಟೇರಿದೆ. ಕಾಂತಾರ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಕಾಂತಾರ–2 ಚಿತ್ರದ ಕುರಿತಾದ ನಿರೀಕ್ಷೆಯೂ ಹೆಚ್ಚಾಗಿದೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದ್ದು, 4ನೇ ಶತಮಾನದ ರಾಜನೊಬ್ಬನ ಕಥೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.

‘ಗುಳಿಗ ಕಾಂತಾರದ ಕಥೆ ನಡೆಯುವ ಕಾಡಿಗೆ ಹೇಗೆ ಬಂತು?, ಅದನ್ನು ತೆಗೆದುಕೊಂಡ ಬಂದ ರಾಜ ಯಾರು?, ಅದನ್ನು ತರುವಾಗ ಏನೆಲ್ಲ ಸಂಕಷ್ಟಗಳು ಎದುರಾದವು ಎಂಬಿತ್ಯಾದಿ ಅಂಶಗಳನ್ನು ಇಟ್ಟುಕೊಂಡು ರಿಷಬ್ ‘ಕಾಂತಾರ–2’ ಕಥೆಯನ್ನು ಹೆಣೆದಿದ್ದಾರೆ’ ಎನ್ನುತ್ತಿದೆ ಆಪ್ತವಲಯ.
.ಕಾಂತಾರ-2 ಮುಹೂರ್ತ: ಕಾಂತಾರದ ಮುನ್ನುಡಿ ಹೇಳಲು ಹೊರಟಿರುವೆ ಎಂದ ನಟ ರಿಷಬ್ ಶೆಟ್ಟಿ.
ಕಾಂತಾರ–2 ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತೆ ವೀಕ್ಷಕರನ್ನು ಭೂತ ಕೋಲದ ಜಗತ್ತಿಗೆ ಕರೆದುಕೊಂಡು ಹೋಗುತ್ತಿಲ್ಲ. ಬದಲಿಗೆ ಹಾಲಿವುಡ್ ಮಾದರಿಯ ಫೈಟ್ಗಳಿಂದ ಚಿತ್ರವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗುವ ಕಥೆಯನ್ನು ರಿಷಬ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಚಿತ್ರದಲ್ಲಿ ಹಾಲಿವುಡ್ನ ಮೂರು ಫೈಟ್ ಮಾಸ್ಟರ್ಗಳು ಕೆಲಸ ಮಾಡುತ್ತಿರುವುದು ಖಚಿತವಾಗಿದೆ. ‘ಬಾರ್ಬೇರಿಯನ್’ ಸಿನಿಮಾದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದ ಸಾಹಸ ನಿರ್ದೇಶಕರು ಕಾಂತಾರ–2 ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಲಿವುಡ್ನ ಇನ್ನೂ ಇಬ್ಬರು ಸಾಹಸ ನಿರ್ದೇಶಕರು ಚಿತ್ರತಂಡ ಸೇರಲಿದ್ದಾರೆ ಎಂಬ ಮಾಹಿತಿ ಇದೆ.

ಹೊಂಬಾಳೆ ಫಿಲ್ಮ್ಸ್ ₹100 ಕೋಟಿಗಿಂತ ಹೆಚ್ಚಿನ ಬಜೆಟ್ನಲ್ಲಿ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ‘ಕಾಂತಾರ’ದ ತಾಂತ್ರಿಕ ತಂಡವೇ ಈ ಭಾಗದಲ್ಲಿಯೂ ಕೆಲಸ ಮಾಡುತ್ತಿದೆ. ಚಿತ್ರೀಕರಣಕ್ಕೆ ತಂಡ ಸಜ್ಜಾಗಿದ್ದು, ಸ್ಥಳ ಹುಡುಕಾಟ ಮತ್ತು ತಾರಾಗಣದ ಅಂತಿಮ ಆಯ್ಕೆ ಕೆಲಸಗಳು ನಡೆಯುತ್ತಿವೆ. ಈ ಸಲ ಕಾಂತಾರ ಸಿನಿಮಾ ಚಿತ್ರೀಕರಣ ಮಾಡಿದ್ದಕ್ಕಿಂತ ದಟ್ಟ ಕಾಡಿನ ಹುಡುಕಾಟದಲ್ಲಿ ತಂಡವಿದೆ.
.ಕದಂಬರ ಕಾಲದ ‘ಕಾಂತಾರ’ ಮೊದಲ ಅಧ್ಯಾಯ: ಏನು ವಿಶೇಷ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.