ಶಿವರಾತ್ರಿ ನಂತರ ಬಿಸಿಲ ಧಗೆ ಹೆಚ್ಚುವುದು ವಾಡಿಕೆ. ಆದರೆ ಈ ಬಾರಿ ರಾಜ್ಯದೆಲ್ಲೆಡೆ ಶಿವರಾತ್ರಿಯಿಂದ ‘ರಾಬರ್ಟ್’ ಬಿರುಗಾಳಿ ಬೀಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣದಲ್ಲೂ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದು, ಮೊದಲ ದಿನವೇ ಎಲ್ಲ ಚಿತ್ರಮಂದಿರಗಳು ಹೌಸ್‌ಫುಲ್ ಆಗಿವೆ.

ರಾಜ್ಯದ 650 ಸ್ಕ್ರೀನ್‌ಗಳಲ್ಲಿ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣದ 250–300 ಸ್ಕ್ರೀನ್ ಸೇರಿ ಒಟ್ಟಾರೆ 950–1,000 ಚಿತ್ರಮಂದಿರಗಳಲ್ಲಿ ರಾಬರ್ಟ್ ಚಿತ್ರವು ತೆರೆಕಂಡಿದೆ. ಬೆಳಗ್ಗೆ ಆರು ಗಂಟೆಯ ಮೊದಲ ಪ್ರದರ್ಶನಕ್ಕೇ ರಾತ್ರಿಯಿಂದಲೇ ಅಭಿಮಾನಿಗಳು ಕಾಯುತ್ತಿದ್ದ ದೃಶ್ಯ ಹಲವೆಡೆಯಿತ್ತು. ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದಲ್ಲಿ ನಿರ್ದೇಶಕ ತರುಣ್ ಸುಧೀರ್, ನಾಯಕಿ ಆಶಾ ಭಟ್ ಜೊತೆಗೂಡಿ ಬೆಳ್ಳಂಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದರು.

‘ಜನರ ಪ್ರತಿಕ್ರಿಯೆ ನೋಡಿ ಏನು ಹೇಳಬೇಕೆಂದೇ ತೋಚುತ್ತಿಲ್ಲ. ಕಳೆದ ಎರಡೂವರೆ ವರ್ಷದಿಂದ ಈ ದಿನಕ್ಕಾಗಿಯೇ ಕಾಯುತ್ತಿದ್ದೆವು. ತುಂಬಾ ಖುಷಿಯಲ್ಲಿದ್ದೇವೆ. ಜನರಿಂದ ಈ ಮಟ್ಟದ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ರಾಜ್ಯದ ಹಲವೆಡೆ ಆರು ಗಂಟೆಯ ಶೋಗಳೇ ಹೌಸ್‌ಫುಲ್ ಆಗಿದೆ. ಇದು ನಿಜಕ್ಕೂ ಸಂತೋಷದ ವಿಷಯ’ ಎಂದು ನಿರ್ದೇಶಕ ತರುಣ್ ಸುಧೀರ್ ಹೇಳಿದರು.

‘ಮೊದಲ ಪ್ರದರ್ಶನ ಆರು ಗಂಟೆಗೆ ಆರಂಭವಾಗಿದ್ದು, ಶಿವರಾತ್ರಿ ಆದ ಕಾರಣ ರಾತ್ರಿ ಇಡೀ ಹೆಚ್ಚಿನ ಶೋ ನಡೆಸಲು 300 ಚಿತ್ರಮಂದಿರಗಳಿಗೆ ಅನುಮತಿ ನೀಡಿದ್ದೇವೆ. ಇವರು ಸ್ಥಳೀಯ ಆಡಳಿತದ ಅನುಮತಿ ಪಡೆಯಬೇಕು. ಈ ಹಿಂದೆ 10 ದಿನಗಳ ಮುಂಚಿತವಾಗಿ ಟಿಕೆಟ್ ಬಿಡುತ್ತಿದ್ದೆವು. ಈ ಬಾರಿ ಎರಡು ದಿನಗಳ ಹಿಂದಷ್ಟೇ ಟಿಕೆಟ್ ಬಿಟ್ಟಿದ್ದೇವೆ. ಮುಂದಿನ ಎರಡು ದಿನಗಳಿಗೆ ಎಲ್ಲ ಚಿತ್ರಮಂದಿರದ ಟಿಕೆಟ್‌ಗಳು ಮಾರಾಟವಾಗಿವೆ. ಇನ್ನು ತಮಿಳು, ತೆಲುಗು ಬೆಲ್ಟ್ ಆಗಿರುವ ಚಿತ್ರಮಂದಿರಗಳಿಗೂ ರಾಬರ್ಟ್ ಲಗ್ಗೆ ಇಟ್ಟಿದೆ’ ಎನ್ನುತ್ತಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.